ಸೋಮವಾರಪೇಟೆ ಬಳಿಯ ಕಲ್ಕಂದೂರು ನಿವಾಸಿ ಮಾಜಿ ಯೋಧ ನಾಪಂಡ ಅಯ್ಯಪ್ಪ (82) ಅವರು ತಾ. 22 ರಂದು ನಿಧನರಾದರು. ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದ ಇವರು ಭಾರತ-ಚೀನಾ ಯುದ್ಧದಲ್ಲಿ ಪಾಲ್ಗೊಂಡು ಗಾಯಾಳುವಾಗಿ ಸೈನ್ಯದಿಂದ ನಿವೃತ್ತರಾಗಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 23 ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.