ಕೂಡಿಗೆ, ಫೆ. 22: ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಮಾನವಿಕ ಸಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ. ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ನಡೆದ ಶಾಸ್ತ್ರೀಯ ಕನ್ನಡ ಪಠ್ಯಗಳ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಶಾಸ್ತ್ರೀಯ ಭಾರತೀಯ ಭಾಷಾ ಸಂಸ್ಥಾನ, ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪೆÇ್ರ. ಕೆ.ಆರ್. ದುರ್ಗಾದಾಸ್ ಪಾಲ್ಗೊಂಡು ಮಾತನಾಡುತ್ತಾ, ಸಾಹಿತ್ಯ ತನ್ನ ಬದುಕಿನ ಅನುಭವವನ್ನು ವ್ಯಾಖ್ಯಾನಿಸುತ್ತದೆ. ಚೇತನಾ ವಸ್ತುಗಳಲ್ಲಿಯೂ ಸಾಹಿತ್ಯದ ಸೂಕ್ಷ್ಮತೆ ಕಾಣಬಹುದು; ಹಾಗಾಗಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಹಳೆಗನ್ನಡ ಸಂಶೋಧಕರಿಗೆ ಶಾಸ್ತ್ರೀಯ ಕನ್ನಡ ಅಧ್ಯಯನ ಶಿಬಿರ ಪ್ರಯೋಜನಕಾರಿಯಾಗಿದೆ. ಸ್ವಯಂ ಆಸಕ್ತಿಯಿಂದ ಶಿಬಿರಗಳಲ್ಲಿ ಬಾಗವಹಿಸಿ ಸಾಹಿತ್ಯದ ಅಭ್ಯಾಸ ಮಾಡಬೇಕು. ಈ ಸಂಸ್ಥೆಯ ಬಹು ಮುಖ್ಯ ಧ್ಯೇಯ ಭಾಷೆಗಳ ಅಭಿವೃದ್ಧಿ ಹಾಗೂ ಸಂಘಟನೆ, ಭಾಷೆಗಳ ವೈಜ್ಞಾನಿಕ ಅಧ್ಯಯನ ಹಾಗೂ ಅಂತರ್ ಭಾಷಾಶಾಸ್ತ್ರ ಸಂಶೋಧನೆಗಳ ಮೂಲಕ ಅಗತ್ಯ ಐಕ್ಯತೆಯನ್ನು ಸಾಧಿಸುವದು ಮತ್ತು ಭಾಷೆಗಳನ್ನು ಪರಸ್ಪರ ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಪೆÇ್ರೀತ್ಸಾಹ ನೀಡುತ್ತಾ, ದೇಶದ ಪ್ರಜೆಗಳ ಭಾವನಾತ್ಮಕ ಐಕ್ಯತೆಗೆ ನೆರವಾಗುವದು ಎಂದರು. ಮೈಸೂರು ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಮಳಲಿ ವಸಂತ್ ಕುಮಾರ್ ಮಾತನಾಡಿ, ಸಾಹಿತ್ಯದ ವಿಚಾರ ಮತ್ತು ಸುಸಂಸ್ಕೃತಿಯನ್ನು ಮಹಾಕಾವ್ಯಗಳು ಹೊಂದಿವೆ. ಜ್ಞಾನಾಗ್ನಿ ಹೊಂದಿರುವ ಮಹಾ ಕಾವ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಶಾಸ್ತ್ರೀಯ ಎಂದರೆ ಶಾಸ್ತ್ರೋತ್ಸವವಾಗಿ ಭೋದನೆ ಎಂದಲ್ಲ ಅದು ಅಧ್ಯಯನ ಕ್ರಮ; ಬದುಕಿನ ನೆಲೆಯಲ್ಲಿ ಭಾಷೆಯ ಸಮರ್ಥತೆಯನ್ನು ಆಪ್ತತೆಯ ಮೂಲಕ ಹಳೆಗನ್ನಡವನ್ನು ಅಭ್ಯಾಸ ಮಾಡಬೇಕು ಎಂದರು. ಹಿರಿಯ ವಕೀಲ ಹಾಗೂ ಸಾಹಿತಿ ಬಾಲಸುಬ್ರಮಣ್ಯ ಕಂಜರ್ಪಣೆ ಮಾತನಾಡಿ, ಶಿಕ್ಷಣ ವೃತ್ತಿಯಲ್ಲಿ ರುವವರು ಮಾತ್ರ ಸಾಹಿತ್ಯ ಬಲ್ಲವರು ಎಂಬ ತಪ್ಪು ತಿಳುವಳಿಕೆ ಇದೆ. ವೃತ್ತಿ-ಪ್ರವೃತ್ತಿಗಳಲ್ಲಿಯೂ ಸಾಹಿತ್ಯ ಕೃಷಿ ಹಾಗೂ ಸಾಹಿತ್ಯಾಬ್ಯಾಸ ಮಾಡಬೇಕು. ಭಾಷೆ ಯಾರ ಸ್ವತ್ತಲ್ಲ; ಸಾಹಿತ್ಯದ ಹಾದಿ ಜನಪದರಿಂದ ಸಾಗಿಬಂದದ್ದು, ಸಾಹಿತ್ಯದ ಮೂಲಕ ಅರ್ಥವಾಗದನ್ನು ಅರ್ಥವಾಗದವರಿಗೆ ಅರ್ಥೈಸುವ ಪ್ರಯತ್ನ ಸಾಗಬೇಕು ಎಂದರು. ಜ್ಞಾನಕಾವೇರಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು. ಐದು ದಿನಗಳ ಕಾಲ ನಡೆದ ಅಭ್ಯಾಸ ಶಿಬಿರದ ಕುರಿತು ಶಿಬಿರಾರ್ಥಿ ಭಾರತಿ ಹಾಗೂ ವಿದ್ಯಾರ್ಥಿನಿ ದಿವ್ಯ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಚಾಲಕ ಮರಿಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರು, ಶಿಬಿರಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕ ಜûಮೀರ್ ಅಹಮದ್, ಡಾ. ಮಹಾಂತೇಶ ಪಾಟೀಲ ನಿರ್ವಹಿಸಿದರು.

ತಾ. 16 ರಿಂದ ತಾ. 20 ರವರೆಗೆ ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಉಪನ್ಯಾಸ ಗೋಷ್ಠಿಗಳಲ್ಲಿ ಕುಮಾರವ್ಯಾಸ ಭಾರತ ಕಥನದ ಭೋಧನಾ ಕ್ರಮವನ್ನು ಫೆÇ್ರ. ಕೃಷ್ಣಮೂರ್ತಿ ಹನೂರು, ಕವಿರಾಜ ಮಾರ್ಗ ಸಾಂಸ್ಕøತಿಕ ನೋಟ ಉಪನ್ಯಾಸವನ್ನು ಪ್ರೊ.ಎನ್.ಎಸ್. ತಾರನಾಥ್, ವಚನ ಸಾಹಿತ್ಯ ಮತ್ತು ಗಮಕ ಉಪನ್ಯಾಸವನ್ನು ಪ್ರೊ.ಜ್ಯೋತಿ ಶಂಕರ್, ಶಬ್ದಮಣಿದರ್ಪಣ ಉಪನ್ಯಾಸವನ್ನು ಡಾ. ಚಂದ್ರಕಲಾ, ಲಕ್ಷ್ಮೀಶನ ಜೈಮಿನಿ ಭಾರತ ಉಪನ್ಯಾಸವನ್ನು ಡಾ. ಪ್ರಕಾಶ್, ರಗಳೆ ಸಾಹಿತ್ಯ ಉಪನ್ಯಾಸವನ್ನು ಪೆÇ್ರ. ಟಿ.ಕೆ. ಕೆಂಪೇಗೌಡ, ವಡ್ಡಾರಾಧನೆಯಲ್ಲಿನ ಸುಕುಮಾರಸ್ವಾಮಿಯ ಕಥೆಯನ್ನು ಪೆÇ್ರ. ಅಭಯಕುಮಾರ್, ಹರಿಶ್ಚಂದ್ರ ಕಾವ್ಯ ಉಪನ್ಯಾಸವನ್ನು ಪೆÇ್ರ. ಸೋಮಣ್ಣ, ಕೀರ್ತನೆಗಳನ್ನು ಸಬಲಂ ಬೋಜಣ್ಣ ರೆಡ್ಡಿ, ಹಲ್ಮಿಡಿ ಶಾಸನ ಮತ್ತು ಬಾದಾಮಿಯ ಶಾಸನವನ್ನು ಓದುವ ಕ್ರಮವನ್ನು ಪೆÇ್ರ. ಎಂ.ಜಿ. ಮಂಜುನಾಥ್, ಹಳಗನ್ನಡ ಪಠ್ಯ ವಾಚನಕ್ಕೆ ಪೂರಕವಾಗಿ ಭಾಷಾ ವಿಜ್ಞಾನ ಉಪನ್ಯಾಸವನ್ನು ಪೆÇ. ರಾಮಕೃಷ್ಣ, ನಯಸೇನನ ಧರ್ಮಾಮೃತ ಉಪನ್ಯಾಸವನ್ನು ಪೆÇ. ಜಿ.ಆರ್. ತಿಪ್ಪೇಸ್ವಾಮಿ, ರನ್ನನ ಗದಾ ಯುದ್ಧ ದುರ್ಯೋಧನ ವಿಲಾಪ ಉಪ ನ್ಯಾಸವನ್ನು ಡಾ. ವರದರಾಜು ಚಂದ್ರಗಿರಿ, ಯಶೋಧರ ಚರಿತೆ ಉಪ ನ್ಯಾಸವನ್ನು ಜ್ಞಾನೇಶ್, ರನ್ನನ ಗದಾ ಯುದ್ಧ ಛಲಮನೆ ಮೆರ್ವೆಂ ಉಪ ನ್ಯಾಸವನ್ನು ಡಾ.ಆರ್. ಚಲಪತಿ ನೀಡಿದರು.