ಮಡಿಕೇರಿ, ಫೆ. 22: ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಮಡಿಕೇರಿಯ ಜಿಲ್ಲಾ ಕಚೇರಿ ಮುಂಭಾಗದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಟಿ.ಎ. ಹ್ಯಾರಿಸ್ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಹ್ಯಾರಿಸ್ ಕಾರ್ಪೊರೇಟ್ ನಿಯಂತ್ರಿತ, ಭ್ರಷ್ಟ, ಕೋಮುವಾದಿ, ಫ್ಯಾಸಿಸ್ಟ್ ಆಡಳಿತದ ಕಪಿಮುಷ್ಠಿಯಲ್ಲಿರುವ ಭಾರತವನ್ನು ರಕ್ಷಿಸಲು ಎಲ್ಲಾ ಧಾರ್ಮಿಕ ಸಮುದಾಯದವರು ಒಂದಾಗಬೇಕಾಗಿರುವದು ಕಾಲದ ಬೇಡಿಕೆಯಾಗಿದೆ ಎಂದರು.

ಎಸ್.ಡಿ.ಪಿ.ಐ.ನ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಸಮಾನತೆ ಮತ್ತು ನ್ಯಾಯಕ್ಕಾಗಿ ಸಂವಿಧಾನಾತ್ಮಕವಾಗಿ ಹೋರಾಡುವ ಸಂಘಟನೆಗಳನ್ನು ಸುಲಭವಾಗಿ ಹತ್ತಿಕ್ಕಲು ಪ್ರಯೋಗಿಸುವ ತಂತ್ರವೇ ಭಯೋತ್ಪಾದನೆಯ ಆರೋಪ ಎಂದು ತಿಳಿಸಿದರು.

ಸಭೆಯಲ್ಲಿ ಹುರೈರಾ, ಹನೀಫ್, ನೂರುದ್ದೀನ್, ಮನ್ಸೂರ್, ರಿಯಾಜ್ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಮುಸ್ತಫಾ ಸ್ವಾಗತಿಸಿ, ನಿರೂಪಣೆ ಮಾಡಿದರು. ಕೊನೆಯಲ್ಲಿ ಸಿಹಿ ವಿತರಣೆ ನಡೆಸಿ ಸಂಭ್ರಮಾಚರಿಸಲಾಯಿತು.

ಕುಶಾಲನಗರ: ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಕುಶಾಲನಗರದಲ್ಲಿ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಟಿ.ಎಂ. ಧ್ವಜಾರೋಹಣ ನೆರವೇರಿಸಿದರು.

ಸಿದ್ದಾಪುರ: ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಸಿದ್ದಾಪುರದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಕೆ.ಸಿ. ಬಷೀರ್ ನೆರವೇರಿಸಿದರು.

ಹೊಸತೋಟ: ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನದ ಪ್ರಯುಕ್ತ ಧ್ವಜಾರೋಹಣವನ್ನು ಜಿಲ್ಲಾ ಸಮಿತಿ ಸದಸ್ಯ ಮಜೀದ್ ನೆರವೇರಿಸಿದರು.