ವಿದ್ಯಾರ್ಥಿ ಒಕ್ಕೂಟದ ವಾರ್ಷಿಕೋತ್ಸವ
ಮಡಿಕೇರಿ: ಕೊಡವ ಸ್ಟೂಡೆಂಟ್ ಅಸೋಸಿಯೇಶನ್ ದಕ್ಷಿಣ ಕನ್ನಡ ಹಾಗೂ ಉಡುಪಿ ಇದರ 18 ನೇ ವಾರ್ಷಿಕ ಸಮಾರಂಭ ಮಂಗಳೂರಿನ ಅಲೋಶಿಯಸ್ ಪ್ರೈಮರಿ ಸಭಾಂಗಣದಲ್ಲಿ ನಡೆಯಿತು. ಅಸೋಸಿಯೇಶನ್ ಅಧ್ಯಕ್ಷ ಓಡಿಯಂಡ ಗಗನ್ ಪೂಣಚ್ಚ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ ಮಾತನಾಡಿ, ಇಂದಿನ ಮಕ್ಕಳು ಕೊಡವರ ಆಚಾರ-ವಿಚಾರವನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ. ಸಣ್ಣ ವಯಸ್ಸಿನಲ್ಲಿ ಕಲಿತ ಪಾಠ ಕೊನೆಯವರೆಗೂ ನಮ್ಮೊಂದಿಗೆ ಇರುತ್ತದೆ ಎಂದರು. ವಕೀಲ ಸೋಮೆಯಂಡ ಪಿ. ಚೆಂಗಪ್ಪ ಮಾತನಾಡಿ, ಕೊಡವರಿಗೆ ಮಾತ್ರ ಇಂದು ಕೋವಿ ಹಕ್ಕಿಗೆ ವಿನಾಯಿತಿ ನೀಡಲಾಗಿದೆ. ಇಂಥಹ ಯಾವ ಅವಕಾಶವು ಬೇರೆ ಜನಾಂಗದವರಿಗೆ ಇಲ್ಲ.ಕೊಡವಾಮೆ ಉಳಿಸಲು ಶ್ರಮಿಸಬೇಕು ಎಂದರು.
ವೇದಿಕೆಯಲ್ಲಿ ಕೊಡವ ಸ್ಟೂಡೆಂಟ್ ಅಸೋಸಿಯೇಶನ್ ಉಪಾಧ್ಯಕ್ಷೆ ಮುಕ್ಕಾಟೀರ ನೇಹಾ ಬೋಜಮ್ಮ, ಕೇಲೇಟಿರ ಪವಿತ್ ಪೂವಯ್ಯ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನೆಲಮಕ್ಕಡ ಕುಂಕುಮ್ ಪೂವಮ್ಮ (ಬಾಸ್ಕೆಟ್ ಬಾಲ್), ಕ್ಯಾಡಮಾಡ ದೀಪ್ತಿ ಹಾಗೂ ತೃಪ್ತಿ (ಫುಟ್‍ಬಾಲ್), ತಾಪಂಡ ನಿಶಾ (ಬ್ಯಾಡ್ಮಿಂಟನ್), ಪರದಂಡ ಪ್ರಜ್ವಲ್ (ಹಾಕಿ), ಚೇಂದ್ರಿಮಾಡ ಭೂಮಿಕಾ (ಮಿಸ್ ಕರ್ನಾಟಕ ಫೈನಲಿಸ್ಟ್), ಕಾವೇರಿ ಸುಬ್ಬಯ್ಯ (ಮಿಸ್ ಕರ್ನಾಟಕ ಸ್ಪರ್ಧಿ) ಇವರುಗಳನ್ನು ಸನ್ಮಾನಿಸಲಾಯಿತು.
ವಾರ್ಷಿಕ ಸಮಾರಂಭದ ಅಂಗವಾಗಿ ನಡೆದ ಮಿಸ್ಟರ್ ಕೆಎಎಸ್‍ಎ ಸ್ಪರ್ಧೆಯಲ್ಲಿ ಮರಡ ಪ್ರೇಮ್ ಪೊನ್ನಣ್ಣ, ಮಿಸ್ ಕೆಎಎಸ್‍ಎ ಸ್ಫರ್ಧೆಯಲ್ಲಿ ಕಾಡೇಮಾಡ ಶೀತಲ್ ಪ್ರಶಸ್ತಿ ಪಡೆದುಕೊಂಡರು. ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಓಡಿಯಂಡ ಗಗನ್ ಪೂಣಚ್ಚ ಸ್ವಾಗತಿಸಿದರೆ. ಮುಕ್ಕಾಟಿರ ನೇಹಾ ದೇಚಮ್ಮ ವಾರ್ಷಿಕ ವರದಿ ವಾಚಿಸಿದರು. ವಂಶಿ ಗಣಪತಿ ಸ್ವಾಗತಿಸಿ, ನಿರೂಪಿಸಿದರು.