ಬೆಂಗಳೂರು, ಫೆ. 22: ಐತಿಹಾಸಿಕ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪಲು ದಸರಾ ಉತ್ಸವಕ್ಕೆ ಸರ್ಕಾರ ಪ್ರತಿ ವರ್ಷ ಅನುದಾನ ನೀಡುತ್ತಿದೆಯಂತೆ ! ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ ವಿಧಾನಪರಿಷತ್ ಸದಸ್ಯರೊಬ್ಬರು ಸದನದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಜಾರಿಕೆಯ ಉತ್ತರ ನೀಡಿದ್ದಾರೆ.ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಸದನದಲ್ಲಿಂದು ಪ್ರಶ್ನೆಯೊಂದನ್ನು ಮುಂದಿಟ್ಟರು. ಪ್ರಶ್ನೆ ಹೀಗಿದೆ : ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ ರಾಜ್ಯದ ಮುಂಗಡ ಪತ್ರದಲ್ಲಿ ಅನುದಾನವನ್ನು ಘೋಷಿಸಲಾಗುವದೆ? ಈ ಎರಡು ಉತ್ಸವಗಳಿಗೆ ಮುಂಗಡ ಪತ್ರದಲ್ಲಿ ಹೆಚ್ಚಿನ ಅನುದಾನ ಘೋಷಿಸಿ ಮೈಸೂರು ದಸರಾ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸುವ ಬಗ್ಗೆ ಸರ್ಕಾರದ ನಿಲುವೇನು?

ಮೇಲಿನ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ನೀಡಿದ ಉತ್ತರ ಹೀಗಿದೆ. ಆರ್ಥಿಕ ಇಲಾಖೆಯ ರಾಷ್ಟ್ರೀಯ ಹಬ್ಬಗಳು ಲೆಕ್ಕ ಶೀರ್ಷಿಕೆಯಡಿಯಲ್ಲಿ ನಮ್ಮ ಇಲಾಖೆ ಪ್ರತಿವರ್ಷ ಮಡಿಕೇರಿ - ಗೋಣಿಕೊಪ್ಪ ದಸರಾ ಉತ್ಸವಕ್ಕೆ ಅನುದಾನ ಬಿಡುಗಡೆ ಮಾಡುತ್ತಿದೆ.

(ಮೊದಲ ಪುಟದಿಂದ) ಮೇಲಿನ ಪ್ರಶ್ನೆಗೂ ಅದಕ್ಕೆ ಸಿಕ್ಕ ಉತ್ತರಕ್ಕೂ ಸಂಬಂಧವೇ ಇಲ್ಲ. ಸರ್ಕಾರ ಕನ್ನಡ ಸಂಸ್ಕøತಿ ಇಲಾಖೆ ವತಿಯಿಂದ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಉತ್ಸವಕ್ಕೆ ಪ್ರತಿ ವರ್ಷ ಅನುದಾನ ಒದಗಿಸುತ್ತಿದೆ ಎಂಬದು ಎಲ್ಲರಿಗೂ ತಿಳಿದ ವಿಷಯ. ಹೀಗಿರುವಾಗ ಮುಂಗಡ ಪತ್ರದಲ್ಲಿ ಅನುದಾನ ನೀಡಲಾಗು ವದೆ? ಹೆಚ್ಚಿನ ಹಣ ಘೋಷಿಸಲಾಗು ವದೆ? ಎಂಬ ಪ್ರಶ್ನೆಗೆ ನೇರ ಉತ್ತರವಿಲ್ಲ. ದಸರಾ ಸಮಿತಿ, ಜನಪ್ರತಿನಿಧಿ ಗಳು, ಉಸ್ತುವಾರಿ ಸಚಿವರು ಹೀಗೆ ನಿಯೋಗಗಳು ಪ್ರತಿವರ್ಷ ಮುಖ್ಯಮಂತ್ರಿಗಳ ಬಳಿ ತೆರಳಿ ಮನವಿ ಸಲ್ಲಿಸಿ, ಕಾಡಿ ಬೇಡಿ ಪಡೆಯುವ ಹಣವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಬಿಡುಗಡೆ ಮಾಡಲಾಗುತ್ತಿದೆಯೇ ವಿನಃ ಯಾವದೇ ಸರ್ಕಾರಗಳು ನೇರವಾಗಿ ಹಣ ನೀಡುತ್ತಿಲ್ಲ ಎಂಬ ಬಗ್ಗೆ ಸರ್ಕಾರಕ್ಕೆ ಅರಿವಿರಬೇಕು.

12 ವರ್ಷಕ್ಕೊಮ್ಮೆ ನಡೆಯುವ ಶ್ರವಣಬೆಳಗೋಳ ಉತ್ಸವಕ್ಕೆ 175 ಕೋಟಿ ಬಿಡುಗಡೆ ಮಾಡುವ ಸರಕಾರ, ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಸನ್ಮಾನ ಕಾರ್ಯಕ್ರಮಕ್ಕೆ 50 ಲಕ್ಷ ಬಿಡುಗಡೆ ಮಾಡುವ ಮುಖ್ಯಮಂತ್ರಿ ಗಳು, ಕೊಡಗಿನ ದಸರಾ ಬಗ್ಗೆ ವಿಶೇಷ ಆಸಕ್ತಿ ವಹಿಸಲಿ ಎಂಬದು ಎಲ್ಲರ ಆಶಯ.