ಗುಡ್ಡೆಹೊಸೂರು,ಫೆ. 23: ಇಲ್ಲಿಗೆ ಸಮೀಪದ ಬೊಳ್ಳೂರು ಗ್ರಾಮದ ನಿವಾಸಿ ಚಂದ್ರ ಎಂಬವರು ಸಹಕಾರ ಸಂಘದಲ್ಲಿ ಮಾಡಿದ್ದ ಸಾಲವನ್ನು ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕುಶಾಲನಗರದ ವ್ಯವಸಾಯೋತ್ಪನ ಸಹಕಾರ ಸಂಘದಲ್ಲಿ ಸುಮಾರು ರೂ. 2.30 ಲಕ್ಷ ಸಾಲ ಮಾಡಿರುವದಾಗಿ ತಿಳಿದು ಬಂದಿದೆ. ಕಳೆದ ರಾತ್ರಿ 11 ಗಂಟೆಗೆ ತಮ್ಮ ಜಮೀನಿನ ಮರದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 55 ವರ್ಷ ಪ್ರಾಯದ ಚಂದ್ರ ಅವರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಆಗಲಿದ್ದಾರೆ. ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.