ಗೋಣಿಕೊಪ್ಪಲು, ಫೆ. 23: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಯ್ಯದಡ್ಲು ಹಾಡಿಗೆ 33 ಕುಟುಂಬಗಳಿಗೆ ಉಚಿತ ಸೋಲರ್ ದೀಪಗಳನ್ನು ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ವಿತರಿಸಿದರು. ಯರವ ಸಮಾಜದ ಅಧ್ಯಕ್ಷ ಶಾಂತಕುಮಾರ್, ಚೆನ್ನಯ್ಯನಕೋಟೆ ಝೋನಲ್ ಕಾಂಗ್ರೆಸ್ ಅಧ್ಯಕ್ಷ ವಾಟೇರಿರ ಸುರೇಶ್, ಕಾಂಗ್ರೆಸ್ ಮುಖಂಡ ಮಾಂಗೇರ ಪೊನ್ನಪ್ಪ ಹಾಡಿಯ ಹಿರಿಯ ವೈ.ವಿ. ರಾಮು ಸೇರಿದಂತೆ ಹಾಡಿಯ ನಿವಾಸಿಗಳು ಪಾಲ್ಗೊಂಡಿದ್ದರು.