ಗೋಣಿಕೊಪ್ಪ ವರದಿ, ಫೆ. 23: ದಕ್ಷಿಣ ಕೊಡಗಿನಲ್ಲಿ ಹುಲಿ ಧಾಳಿಯನ್ನು ತಡೆಯುವಲ್ಲಿ ಅರಣ್ಯ ಇಲಾಖೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಆರೋಪಿಸಿದ್ದಾರೆ.

ಕೊಟ್ಟಗೇರಿ, ಧನುಗಾಲ, ಕುಮಟೂರು, ಬಾಡಗರಗೇರಿ ಸೇರಿದಂತೆ ಹಲವು ಕಡೆಗಳಲ್ಲಿ ಹುಲಿ ಧಾಳಿ ನಡೆಸುತ್ತಿದೆ. ಆದರೆ ಅರಣ್ಯ ಇಲಾಖೆ ಹುಲಿ ಸೆರೆಹಿಡಿಯುವಲ್ಲಿ ವಿಫಲವಾಗಿದೆ. ಅರಣ್ಯ ಇಲಾಖೆ ಬೇರೆ ವಿಧಾನವನ್ನು ಬಳಸಿ ಸೆರೆಹಿಡಿಯಬೇಕಾಗಿದೆ. ಬೆಳೆಗಾರರರು ಸಾಕಿದ ಸಾಕು ಪ್ರಾಣಿಗಳು ಹುಲಿ ಧಾಳಿಗೆ ಬಲಿಯಾಗುತ್ತಿದೆ. ಅರಣ್ಯ ಇಲಾಖೆಯವರು ಬೋನ್ ಇರಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸೂಕ್ತ ನಿರ್ಧಾರ ಕೈಗೊಂಡು ಹುಲಿಯನ್ನು ಸೆರೆಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.