ಕೂಡಿಗೆ, ಫೆ. 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಕೂಡುಮಂಗಳೂರು ಒಕ್ಕೂಟ ಸಭೆ ನಡೆಯಿತು.

ರಾಧ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡಿಗೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ಹಿಡುವಳಿ ಯೋಜನೆ ಅನುಷ್ಠಾನದ ವಿಧಾನಗಳ ಬಗ್ಗೆ, ಪ್ರಗತಿನಿಧಿಯ ಸದ್ಬಳಕೆ, ಶೌಚಾಲಯ ನಿರ್ಮಾಣಕ್ಕೆ ಪ್ರೇರಣೆಗಾಗಿ ಕ್ಷೇತ್ರದಿಂದ ನೀಡಲಾಗುತ್ತಿರುವ ಅನುದಾನಗಳ ಬಗ್ಗೆ ತಿಳಿಸಿದರು. 2018-19ನೇ ಸಾಲಿನ ಕ್ರಿಯಾಯೋಜನೆಯ ತಯಾರಿ, ಪ್ರತಿ ಕುಟುಂಬಕ್ಕೂ ಸೋಲಾರ್ ಘಟಕಗಳ ಅಳಡಿವಕೆ ಹಾಗೂ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

32 ಸಂಘಗಳ ಸದಸ್ಯರು, ಸೇವಾಪ್ರತಿನಿಧಿ ನಿರ್ಮಲ, ಒಕ್ಕೂಟದ ಪದಾಧಿಕಾರಿಗಳಾದ ಅರುಣಾಕ್ಷಿ, ಶೀಲಾ, ನಾಗರತ್ನ, ಬೀನಾ, ಮಣಿಕಂಠ ಮತ್ತಿತರರು ಇದ್ದರು.