ಮಡಿಕೇರಿ, ಫೆ. 23: ಶನಿವಾರಸಂತೆ ಸಮೀಪದ ಗೋಪಾಲಪುರ ನಿವಾಸಿ ಶಿವಪ್ರಕಾಶ್ (ಮಂಜು) ಎಂಬವರು ಮರದಿಂದ ಬಿದ್ದು ಗಂಭೀರ ಗಾಯಗೊಂಡ ಹಿನ್ನೆಲೆ ಕಳೆದ ಕೆಲವು ವರ್ಷಗಳಿಂದ ಹಾಸಿಗೆಯನ್ನು ಹಿಡಿದಿದ್ದರು.
ಶನಿವಾರಸಂತೆ ಹಾಗೂ ಕುಶಾಲನಗರದ ಪಿಎಫ್ಐ ಕಾರ್ಯಕರ್ತರು ಶಿವಪ್ರಕಾಶ್ ಮನೆಗೆ ಭೇಟಿ ನೀಡಿ ಗಾಲಿ ಕುರ್ಚಿ ಹಸ್ತಾಂತರಿಸಿದರು. ಈ ಸಂದರ್ಭ ಶನಿವಾರಸಂತೆ ಪಿಎಫ್ಐ ಅಧ್ಯಕ್ಷ ಮುನೀರ್, ಕಾರ್ಯದರ್ಶಿ ಭಾಷಾ, ಎಸ್ಡಿಪಿಐ ಪಕ್ಷದ ಆಬಿದ್, ಇಮ್ರಾನ್, ಮುಜಾಹಿದ್, ಶರೀಫ್, ಅಜೀಜ್, ಅಕ್ಮಲ್ ಪಾಷಾ ಇದ್ದರು.