ಮಡಿಕೇರಿ, ಫೆ. 23: ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ 2016-17 ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗಾಗಿ ಜಾನಪದ ಗಾಯನ ಕಲಿಕಾ ತರಬೇತಿ ಶಿಬಿರ ಹಾಗೂ 2017-18ನೇ ಸಾಲಿನ ಜಾನಪದ ಗಾಯನ, ತತ್ವಪದ ಮತ್ತು ಏಕತಾರಿ ಪದಗಳ ಕಲಿಕಾ ತರಬೇತಿ ಶಿಬಿರವನ್ನು ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮೂಲ ಗುರುಗಳಿಂದ ತರಬೇತಿ ನೀಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 18 ರಿಂದ 35 ವರ್ಷದೊಳಗಿನ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಗಳನ್ನು ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು ಹಾಗೂ ಜಿಲ್ಲಾ ಸಹಾಯಕ ನಿರ್ದೇಶಕರುಗಳ ಕಾರ್ಯಾಲಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಅಕಾಡೆಮಿಯ ವೆಬ್ ಸೈಟ್(ತಿತಿತಿ.ಞಚಿಡಿಟಿಚಿಣಚಿ ಞಚಿರಿಚಿಟಿಚಿಠಿಚಿಜಚಿ.iಟಿ)ನಲ್ಲಿ ಅರ್ಜಿಗಳನ್ನು ಪಡೆಯಬಹುದಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಜಾನಪದ ಅಕಾಡೆಮಿ ದೂ.ಸಂ 080-22215509 ಸಂಪರ್ಕಿಸಬಹುದು.