*ಸಿದ್ದಾಪುರ, ಫೆ. 23: ನ್ಯೂಫ್ರೆಂಡ್ಸ್ ಯುವಕ ಸಂಘದ ಅಭ್ಯತ್‍ಮಂಗಲದ ವತಿಯಿಂದ ರಾಜ್ಯಮಟ್ಟದ ಸೂರ್ಯಬೆಳಕಿನ ಕಬಡ್ಡಿ ಪಂದ್ಯಾಟವು ತಾ.25 ರಂದು ಬೆಳಿಗ್ಗೆ 9 ಗಂಟೆಗೆ ಅಭ್ಯತ್‍ಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಕಬಡ್ಡಿ ಪಂದ್ಯದ ಉದ್ಘಾಟನೆಯನ್ನು ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ಹಾಗೂ ಪ್ರಥಮ ಬಹುಮಾನ ರೂ. 20 ಸಾವಿರ ದಾನಿಗಳಾದ ನಾಪಂಡ ಮುತ್ತಪ್ಪ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ್ವಿತೀಯ ಬಹುಮಾನ ರೂ. 15 ಸಾವಿರ, ದಾನಿಗಳಾದ ಸುಭಾಷ್, ಕೆದಂಬಾಡಿ ಮಂಜುನಾಥ 3ನೇ ಬಹುಮಾನ ರೂ. 7 ಸಾವಿರ , ದಾನಿಗಳಾದ ಅಭ್ಯತ್‍ಮಂಗಲದ ಸಂಜೀವ 4ನೇ ಬಹುಮಾನ, ರೂ, 5ಸಾವಿರ ದಾನಿ ಕಾಫಿ ಬೆಳೆಗಾರ ಇಂದ್ರಕುಮಾರ್ ಆಗಮಿಸಲಿದ್ದಾರೆ. ಅನ್ನದಾನದ ದಾನಿಗಳಾದ ಜಿ.ಪಂ.ಸದಸ್ಯೆ ಸುನಿತಾ ಮಂಜುನಾಥ, ಮನು ಮಹೇಶ, ಬಿ.ಎಸ್.ತಿಮ್ಮಪ್ಪ, ವಾಲ್ನೂರು ತ್ಯಾಗತ್ತೂರು ಗ್ರಾ.ಪಂ.ಸದಸ್ಯ ಅಂಚೆಮನೆ ಸುಧಿ, ಬಿ.ಆರ್.ಮಂಜು ಹಾಗೂ ಹರೀಶ ಅತಿಥಿಗಳಾಗಿ ಆಗಮಿಸಲಿದ್ದಾರೆ.