ಸುಂಟಿಕೊಪ್ಪ, ಫೆ. 23: ನಾಕೂರು-ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ 18ನೇ ವರ್ಷದ ಕ್ರೀಡೋತ್ಸವ ತಾ. 25 ರಂದು ನಡೆಯಲಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ರಸ್ತೆ ಓಟಕ್ಕೆ ಕಾಫಿ ಬೆಳೆಗಾರ ವಿ.ಕೆ. ವಿಜಯಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಕ್ಲಬ್‍ನ ಅಧ್ಯಕ್ಷ ಶಂಕರನಾರಾಯಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬಡ್ಡಿ ಪಂದ್ಯದ ಉದ್ಘಾಟನೆಯನ್ನು ಮಧ್ಯಾಹ್ನ 12 ಗಂಟೆಗೆ ಕರ್ನಾಟಕ ಹಾಕಿ ತಂಡದ ಮಾಜಿ ನಾಯಕ ಕಿರಣ್ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 6.30 ಗಂಟೆಗೆ ನಡೆಯಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ವಹಿಸಲಿದ್ದು, ಉದ್ಘಾಟನೆಯನ್ನು ನಾಕೂರು-ಶಿರಂಗಾಲ ಗ್ರಾ.ಪಂ. ಅಧ್ಯಕ್ಷೆ ರಂಜನಿ ಕುಂಞಕೃಷ್ಣ ನೆರವೇರಿಸಲಿದ್ದಾರೆ.

ಬಹುಮಾನ ವಿತರಣೆಯನ್ನು ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ, ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಜಿ.ಪಂ. ಮಾಜಿ ಸದಸ್ಯ ವಿ.ಪಿ.ಶಶಿಧರ್, ಕಾಫಿ ಬೆಳೆಗಾರ ಟಿ.ಕೆ. ಸಾಯಿಕುಮಾರ್, ರೆಸಾರ್ಟ್ ಮಾಲೀಕ ಪಾಪಣ್ಣ, ಗಿರೀಶ, ಅತಿಥಿಗಳಾಗಿ ತಾ.ಪಂ. ಸದಸ್ಯೆ ಹೆಚ್.ಡಿ. ಮಣಿ, ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯೆ ಕವಿತಾ ಮಂಜುನಾಥ್, ತಾ.ಪಂ. ಮಾಜಿ ಉಪಾಧ್ಯಕ್ಷ ಜರ್ಮಿಡಿಸೋಜ, ನಿವೃತ್ತ ಕರ್ನಲ್ ಎ.ಈ. ಗಣಪತಿ, ಅಂತರ್ರಾಷ್ಟ್ರೀಯ ಹಾಕಿ ತೀರ್ಪುಗಾರ ವೇಣು ಉತ್ತಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಭೀಮಂಡ ಪೂಣಚ್ಚ, ಗ್ರಾ.ಪಂ. ಸದಸ್ಯರಾದ ಕೆ.ಪಿ. ವಸಂತ ಕುಮಾರ್ ಆಗಮಿಸಲಿದ್ದಾರೆ ಎಂದರು.

ಪುರುಷರಿಗೆ ಮುಕ್ತ ಕಬಡ್ಡಿ ಪಂದ್ಯಾಟ, ರಸ್ತೆ ಓಟ, ಮಹಿಳೆಯರಿಗೆ ಪಾಸಿಂಗ್‍ದ ಬಾಲ್, ಬಾಂಬಿಂಗ್‍ದ ಸಿಟಿ ಸ್ಪರ್ಧೆ, ಮಹಿಳೆಯರು ಹಾಗೂ ಪುರುಷರಿಗೆ ಹಗ್ಗಜಗ್ಗಾಟ, 5 ವರ್ಷ ಒಳಗಿನ ಮಕ್ಕಳಿಗೆ ಕಾಳು ಹೆಕ್ಕುವದು, ಕಪ್ಪೆ ಜಿಗಿತ, ಗೋಣಿ ಚೀಲ ಜಿಗಿತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅಂದು ಸಂಜೆ 5.30 ಗಂಟೆ ನಂತರ ಸ್ಥಳೀಯರಿಗೆ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಡ್ಯಾನ್ಸ್ ಮೇಳ ಏರ್ಪಡಿಸಲಾಗಿದೆ.

ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. 20,000 ನಗದು, ದ್ವಿತೀಯ ಸ್ಥಾನ ಪಡೆದವರಿಗೆ ರೂ. 15,000 ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ. 10,000 ನಗದು ಬಹುಮಾನ ನೀಡಲಾಗುವದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಎ. ವಸಂತ, ಗೌರವಧ್ಯಕ್ಷ ಕೆ.ಎಸ್. ವಿನೋದ್, ಸಹ ಕಾರ್ಯದರ್ಶಿ ಬಾಲಕೃಷ್ಣ, ಖಜಾಂಚಿ ಪಿ.ಎಸ್. ಅನಿಲ್ ಕುಮಾರ್, ಕ್ರೀಡಾ ಕಾರ್ಯದರ್ಶಿ ರವಿ, ಸಾಂಸ್ಕøತಿಕ ಕಾರ್ಯದರ್ಶಿ ಇಸ್ಮಾಯಿಲ್ ಉಪಸ್ಥಿತರಿದ್ದರು.