ಮಡಿಕೇರಿ, ಫೆ. 23 : ಕೊಡಗು ಜಿಲ್ಲಾ ಮೊಗೇರ ಯುವ ಬಳಗದ ಪ್ರಥಮ ಸಭೆ ತಾ. 25 ರಂದು ಸರಕಾರಿ ನೌಕರರ ಸಭಾಂಗಣದಲ್ಲಿ ನಡೆಯಲಿದೆ. ಸಭೆಯಲ್ಲಿ ಮೊಗೇರ ಸಮಾಜದ ಜಿಲ್ಲಾಧ್ಯಕ್ಷರಾದ ಬಿ.ಶಿವಪ್ಪ, ಪದಾಧಿಕಾರಿ ವಿಶ್ವನಾಥ್ ಮೊಗೇರ, ಜಿಲ್ಲಾ ಸಂಚಾಲಕ ಜನಾರ್ದನ ಮೊಗೇರ, ಮಡಿಕೇರಿ ಸಂಚಾಲಕ ವಿವೇಕ್ ಮೊಗೇರ ಪಾಲ್ಗೊಳ್ಳಲಿದ್ದಾರೆ.
‘ಮೊಗೇರ ಸಮಾಜದ ಅಭಿವೃದ್ಧಿ ಯಲ್ಲಿ ಯುವಕರ ಪಾತ್ರ’ ವಿಷಯದ ಕುರಿತು ಚರ್ಚಿಸಲು ಸಭೆ ನಡೆಯಲಿದೆ ಎಂದು ಮೊಗೇರ ಯುವ ಬಳಗವನ್ನು ರಚಿಸಿದ ಶಂಕರ್ ಮತ್ತು ಶ್ರೀನಿವಾಸ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8762623879, 96118120027 ನ್ನು ಸಂಪರ್ಕಿಸಬಹುದಾಗಿದೆ.