ಮಡಿಕೇರಿ, ಫೆ. 23 : ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ಮಾ.27ರಿಂದ ಏ. 1 ರವರೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ನ ಗೌರವಾಧ್ಯಕ್ಷ ಅಬ್ದುಲ್ ರಶೀದ್ ಅವರು, ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ಹಾಗೂ ಮಡಿಕೇರಿಯ ಬ್ಯಾರಿ ವಾರಿಯರ್ಸ್ ಮತ್ತು ತ್ಯಾಗ್ ಬಾಯ್ಸ್ ಜಂಟಿ ಆಶ್ರಯದಲ್ಲಿ 15ನೇ ವರ್ಷದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದ್ದು, ವಿಜೇತ ತಂಡಗಳಿಗೆ 55,555(ಪ್ರಥಮ), 33,333(ದ್ವಿ), 11,111(ತೃ) ಹಾಗೂ 8,888(ಚತುರ್ಥ) ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡ ಲಾಗುವದು ಎಂದು ವಿವರಿಸಿದರು ತಂಡಗಳ ನೋಂದಣಿಗೆ ಮಾ.20 ಕೊನೆಯ
(ಮೊದಲ ಪುಟದಿಂದ) ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ 9902975137, 9071875078 ಅಥವಾ 8217846047ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಅಸೋಸಿಯೇಷನ್ನ ಅಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ಸೈಫ್ ಆಲಿ, ಬ್ಯಾರಿ ವಾರಿಯರ್ಸ್ನ ಹ್ಯಾರಿಸ್, ನಾಸಿರ್, ಫಹತ್ ಹಾಜರಿದ್ದರು.