ಗೋಣಿಕೊಪ್ಪಲು, ಫೆ. 23: ದ.ಕೊಡಗಿನ ಕುಮಟೂರು ಗ್ರಾಮದ ಬೊಜ್ಜಂಗಡ ಗಣಪತಿ (ಗಪ್ಪು) ಎಂಬವರ ಮನೆಗೆ ಮುಂಜಾನೆ ತೆರಳಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಸು ಕಳೆದುಕೊಂಡ ರೈತ ಕುಟುಂಬಕ್ಕೆ 10 ಸಾವಿರ ಸಹಾಯ ಹಸ್ತ ನೀಡುವ ಮೂಲಕ ಕುಟುಂಬದವರಿಗೆ ನೆರವಾದರು. ಮನೆಯ ಸಮೀಪವಿರುವ ಕೊಟ್ಟಿಗೆಯಿಂದ ಎರಡು ಹಾಲು ಕೊಡುವÀ ಹಸುಗಳನ್ನು ಹುಲಿ ಧಾಳಿ ನಡೆಸಿ ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿ ಹಸು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಹೇಳಿ. ಕಾನೂನು ಹೋರಾಟಕ್ಕೆ ಸಹಕರಿಸುವದಾಗಿ ತಿಳಿಸಿದರು. ಸ್ಥಳದಿಂದ ದೂರವಾಣಿ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯೊಂದಿಗೆ ಕೊಡಗಿನಲ್ಲಿ ಹುಲಿ, ಕಾಡಾನೆ ಧಾಳಿಯಿಂದ ಆಗುತ್ತಿರುವ ತೊಂದರೆ ಬಗ್ಗೆ ಸಂಕೇತ್ ಗಮನ ಸೆಳೆದರು. ಈ ಸಂದರ್ಭ ಹಸು ಕಳೆದುಕೊಂಡ ರೈತ ಗಣಪತಿಯೊಂದಿಗೆ ಮಾತನಾಡಿದ ಕುಮಾರಸ್ವಾಮಿ ಮುಂದಿನ ದಿನದಲ್ಲಿ ನೊಂದ ಕುಟುಂಬಗಳಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವದು ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ಬೊಜ್ಜಂಗಡ ಕಾವೇರಮ್ಮ, ಬೊಜ್ಜಂಗಡ ಕೃಷ್ಣಕುಮಾರ್, ಬೊಜ್ಜಂಗಡ ಸುಬ್ರಮಣಿ, ಬೊಜ್ಜಂಗಡ ಚಂದನ್, ಮತ್ತಿತರರು ಹಾಜರಿದ್ದರು.