ಸೋಮವಾರಪೇಟೆ,ಫೆ.23: 2018-19ನೇ ಸಾಲಿಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಿಂದ ರೂ. 23.19 ಲಕ್ಷ ಉಳಿತಾಯ ಬಜೆಟ್‍ನ್ನು ಪ. ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಂಡಿಸಿದರು.ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನಾ ಸಭೆಯಲ್ಲಿ 2018-19ನೇ ಸಾಲಿಗೆ ಎಲ್ಲ ಮೂಲಗಳಿಂದ 918.27 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. 895.18ಲಕ್ಷ ರೂ. ವೆಚ್ಚ ನಿಗದಿಯಾಗಿದ್ದು, ಒಟ್ಟು 23.19ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷರು ವಿವರಿಸಿದರು.ಸೋಮವಾರಪೇಟೆ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಟ್ಟಣದಲ್ಲಿ ರಸ್ತೆ, ನೀರು, ಚರಂಡಿ, ತ್ಯಾಜ್ಯ ವಿಲೇವಾರಿ, ಬೀದಿ ದೀಪಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮಾಡಬೇಕಿದೆ. ಅಲ್ಲದೆ, ವಿವಿಧ

(ಮೊದಲ ಪುಟದಿಂದ) ಮೂಲ ಗಳಿಂದ ತೆರಿಗೆ ಸಂಗ್ರಹಿಸಿ ಪಂಚಾಯಿತಿ ಯ ಆದಾಯ ಮೂಲಗಳನ್ನು ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಿಸಿದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ, ಸದಸ್ಯರಾದ ಬಿ.ಎಂ. ಸುರೇಶ್, ಬಿ.ಸಿ. ವೆಂಕಟೇಶ್, ಸುಶೀಲಾ, ಲೀಲಾ ನಿರ್ವಾಣಿ, ಮೀನಕುಮಾರಿ, ನಾಮ ನಿರ್ದೇಶಿತ ಸದಸ್ಯರಾದ ಹೆತ್ತೂರು ರಾಜಣ್ಣ, ಉದಯಶಂಕರ್ ಹಾಗೂ ಬಿ.ಜಿ. ಇಂದ್ರೇಶ್, ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಸಿಬ್ಬಂದಿಗಳಾದ ಭಾವನ, ಪಿಯುಶ್ ಡಿಸೋಜಾ, ಉದಯಕುಮಾರ್, ರೂಪಾ, ರಫೀಕ್, ಕಚೇರಿ ಸಹಾಯಕ ಹನುಮ ಸೇರಿದಂತೆ ಇತರರು ಉಪಸ್ಥಿತರಿದ್ದರು.