ಮಡಿಕೇರಿ, ಫೆ.23 : ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಾ.26 ರಂದು ಮಡಿಕೇರಿಯ ಕ್ರೀಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ಶೀಲತಾ ಕಾರ್ಯಾಗಾರ ನಡೆಯಲಿದೆ.

ಭಾರತ ಸರ್ಕಾರದ ಕೌಶಲ್ಯ ಅಭಿವೃದ್ದಿ ಯೋಜನಾ ನಿಗಮದ ಜೊತೆಯಲ್ಲಿ ರೀಟ್ ಇಂಡಿಯಾ ಹಾಗೂ ಧಾತ್ರಿ ಫೌಂಡೇಶನ್ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರದ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್‍ಕುಮಾರ್ ಹೆಗಡೆ ಪಾಲ್ಗೊಳ್ಳಲಿ ದ್ದಾರೆ. ಉದ್ಯೋಗ ಶೀಲತಾ ವ್ಯಕ್ತಿಗಳು, ಕೈಗಾರಿಕೋ ದ್ಯಮಿಗಳು, ಉದ್ಯೋಗಾಂಕಾಕ್ಷಿಗಳು ಜೊತೆ ಅವರು ಸಮಾ ಲೋಚನೆ ಮತ್ತು ಸಂವಾದ ನಡೆಸಲಿದ್ದು ಇದರ ಸದುಪಯೋಗ ವನ್ನು ಪಡೆಯ ಬೇಕೆಂದು ಕೋರ ಲಾಗಿದೆ. ಇದರೊಂದಿಗೆ ಯಾವದೇ ವಿದ್ಯಾರ್ಥಿಗಳು ಸಂಶೋಧನಾ ನಿರತರು ಹಾಗೂ ತಾಂತ್ರಿಕ ನಿಪುಣರು ತಮ್ಮ ಅಲೋಚನೆ ಮತ್ತು ಹೊಸ ಪರಿಕಲ್ಪನೆಗಳನ್ನು ಉದ್ಯೋಗ ಸೃಷ್ಟಿಯ ಹಾದಿಯಲ್ಲಿ ಕೇಂದ್ರ ಸಚಿವರೊಂದಿಗೆ ಹಂಚಿಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮವು ತಾ.26 ರ ಪೂರ್ವಾಹ್ನ 9 ಗಂಟೆಗೆ ನೋಂದಣಿಯೊಂದಿಗೆ ಆರಂಭ ವಾಗಲಿದ್ದು, ಅಪರಾಹ್ನ 12.30ಕ್ಕೆ ಮುಕ್ತಾಯಗೊಳ್ಳಿಲಿದೆ. ವಿಶೇಷವಾಗಿ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ಹಾಗೂ ಸ್ವಯಂ ಉದ್ಯೋಗ ಮಾಡಲು ಬಯಸುವವರಿಗೆ ಮತ್ತು ಈಗಾಗಲೇ ವಿವಿಧ ಹಂತಗಳಲ್ಲಿ ಸ್ವಯಂ ಉದ್ಯೋಗ ಮತ್ತು ಇತರ ವಿಧ್ಯಾಭ್ಯಾಸ ಹಂತಗಳನ್ನು ದಾಟಿ ದವರಿಗೆ ಇದೊಂದು ಅಪೂರ್ವ ಅವಕಾಶವಾಗಿದೆ ಎಂದು ಪ್ರಕಟಣೆ ತಿಳಿಸಿದೆ.