ಗೋಣಿಕೊಪ್ಪ ವರದಿ, ಫೆ. 23: ಇಗ್ಗುತಪ್ಪ ಕೊಡವ ಸಂಘ ಮತ್ತು ಅಖಿಲ ಕೊಡವ ಸಮಾಜ ವತಿಯಿಂದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150ನೇ ಜನ್ಮೋತ್ಸವವನ್ನು ತಾ. 28 ರಂದು ಇಲ್ಲಿನ ಕಾವೇರಿ ಮಹಿಳಾ ಸಮಾಜದಲ್ಲಿ ಆಚರಿಸಲಾಗುವದು.
ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅತಿಥಿüಗಳಾಗಿ ಅಖಿಲ ಕೊಡವ ಸಮಾಜ ನಿರ್ದೇಶಕಿ ಮೂವೇರ ರೇಖಾ ಪ್ರಕಾಶ್, ನಿವೃತ್ತ ಪ್ರೊ. ಕಲ್ಯಾಟಂಡ ಬಿ. ಚಿಣ್ಣಪ್ಪ, ಪ್ರೊ. ಇಟ್ಟೀರ ಕಮಲಾಕ್ಷಿ ಬಿದ್ದಪ್ಪ, ಸಾಹಿತಿ ಅಡ್ಡಂಡ ಸಿ. ಕಾರ್ಯಪ್ಪ, ಕಾವೇರಿ ಮಹಿಳಾ ಸಮಾಜ ಅಧ್ಯಕ್ಷೆ ಕಟ್ಟೇರ ಉತ್ತರೆ ಅಪ್ಪಚ್ಚು ಭಾಗವಹಿಸಲಿದ್ದಾರೆ ಎಂದು ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ತಿಳಿಸಿದ್ದಾರೆ.