ಮಡಿಕೇರಿ, ಫೆ. 24: ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ, ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಣಿಜ್ಯ ಮತ್ತು ನಿರ್ವಹಣಾ ಸಂಸ್ಥೆ ವತಿಯಿಂದ ಎರಡು ದಿನಗಳ ಅಂತರ ಕಾಲೇಜು ವಾಣಿಜ್ಯ ಮತ್ತು ನಿರ್ವಹಣೆ ಉತ್ಸವ ಉದ್ಘಾಟನೆ ತಾ. 26 ರಂದು ಬೆಳಿಗ್ಗೆ 10 ಗಂಟೆಗೆ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಬ್ಲಾಕ್ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆಯ ಜಿ.ಎಫ್.ಜಿ.ಸಿ. ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ವಹಿಸಲಿದ್ದಾರೆ. ದಿ ಪೌಲ್ ಕಾಲೇಜು ಪ್ರಾಂಶುಪಾಲ ಡಾ. ಬೈಜು ಅಂಥೋನಿ, ವೀರಾಜಪೇಟೆಯ ಜಿ.ಎಫ್.ಜಿ.ಸಿ.ಯ ವಾಣಿಜ್ಯ ಮತ್ತು ನಿರ್ವಹಣೆಯ ಸಹಾಯಕ ಪ್ರಾಧ್ಯಾಪಕರುಗಳಾದ ವೇಣುಗೋಪಾಲ್ ಹೆಚ್.ಎಸ್., ಮಂಜುನಾಥ್.ಆರ್., ಸುನೀತಾ ಎಂ.ಎಂ., ಗುರುಪ್ರಸಾದ್ ಎನ್. ಇತರರು ಭಾಗವಹಿಸಲಿದ್ದಾರೆ.