ಮಡಿಕೇರಿ, ಫೆ. 24: ಮೈಸೂರಿನ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆ ಹಾಗೂ ವಾಜಪೇಯಿ ಆರೋಗ್ಯ ಶ್ರೀಯೋಜನೆಯಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ತಾ. 26 ರಂದು ಬೆಳಿಗ್ಗೆ 10 ರಿಂದ 2 ಗಂಟೆ ತನಕ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 0821-2300600 ಅಥವಾ 953886686ನಲ್ಲಿ ಸಂಪರ್ಕಿ ಸಬಹುದು ಎಂದು ಪ್ರಕಟಣೆ ತಿಳಿಸಿದೆ.