ವೀರಾಜಪೇಟೆ, ಫೆ. 24: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಮಾರ್ಗವಾಗಿ ಗುಂಡಿಗೆರೆ ಗ್ರಾಮಕ್ಕೆ ತೆರಳುವ ರಸ್ತೆಗೆ ಮುಖ್ಯ ಮಂತ್ರಿಗಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ರೂ,10 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಗೆ ತಾ.ಪಂ. ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಚಾಲನೆ ನೀಡಿದರು. ಈಗಾಗಲೇ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದ್ದು ಇನ್ನು 5 ರಸ್ತೆಗಳ ಅಭಿವೃದ್ದಿ ಕಾಮಗಾರಿಗಳನ್ನು ಸಧ್ಯದಲ್ಲೆ ಪ್ರಾರಂಭಿಸಲಾಗುವದು ಎಂದರು.

ಈ ಸಂದರ್ಭ ಬಾರಿಕಾಡು ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎಂ.ಇಸ್ಮಾಯಿಲ್, ತೇಜಾ ಪ್ರವೀಣ್, ಮಾಜಿ ಅಧ್ಯಕ್ಷ ಇಮ್ಮಿ ಪೊನ್ನಪ್ಪ, ಮಾಜಿ ಸದಸ್ಯರಾದ ಮಾಳೇಟಿರ ಸುಬು ಸುಬ್ರಾಯ, ಹಾಗೂ ಶೈಲಾ, ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಮುದ್ದಯ್ಯ, ಗ್ರಾಮಸ್ಥರಾದ ಪ್ರವೀಣ್, ಅಬೀಬ್, ಮುರುಳಿ, ಶರಣು ಮುಂತಾದವರು ಉಪಸ್ಥಿತರಿದ್ದರು.