ಪೊನ್ನಂಪೇಟೆ: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಪಾನ್ ಶೋಟಕಾನ್ ಜಿಲ್ಲಾಮಟ್ಟದ ಕರಾಟೆ ಶಿಬಿರ ಹಾಗೂ ಬ್ಲ್ಯಾಕ್ ಬೆಲ್ಟ್ ಮತ್ತು ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಾದ ಎಂ.ಎನ್. ಚಿರಾಲ್, ಡಿ.ಎಸ್. ಬಿದ್ದಪ್ಪ, ಬಿ.ಯಸ್. ಚಂಶಿತಾ, ಸಿ.ಪಿ. ನಿಹಾರಿಕಾ ಹಾಗೂ ಅಪ್ಪಚ್ಚು ಕವಿ ವಿದ್ಯಾಲಯದ ಬಿ.ಎ. ವಿಷ್ಣು ಮತ್ತು ಮೂರ್ನಾಡು ಸೆನ್ಸಾಯ್ ಶ್ಯಾಮ್ ವಿದ್ಯಾರ್ಥಿಗಳಾದ ಮುಕ್ತ ಕೆ.ಆರ್., ಲಕ್ಷ್ಯ ಕೆ.ಡಿ., ಚಿರಾಗ್ ಚಿಣ್ಣಪ್ಪ ಪಿ.ಎಸ್., ಅಮನ್ ಸಯೋಜ್ ಕೆ., ಸಾಯಿಕುಮಾರ್ ಆರ್. ಇವರುಗಳು ಬ್ಲ್ಯಾಕ್ ಬೆಲ್ಟ್ ಮತ್ತು ಪ್ರಶಸ್ತಿ ಪತ್ರ ಪಡೆದುಕೊಂಡಿರುತ್ತಾರೆ.
ಸೆನ್ಸಾಯ್ ಸಂತೋಷ್ ಕುಮಾರ್ ಬಿ.ಯಸ್. ಆಯೋಜಕರಾಗಿದ್ದರು. ಕೇರಳದ ಮುಖ್ಯ ಶಿಕ್ಷಕ ಸೆನ್ಸಾಯ್ ಗೋಪಾಲಕೃಷ್ಣನ್, ಸೆನ್ಸಾಯ್ ವರ್ಗೀಸ್ ಇವರು ವಿದ್ಯಾರ್ಥಿಗಳಿಗೆ ಕಠಿಣ ತರಬೇತಿ ನೀಡಿರುತ್ತಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಮಹೇಶ್ ಠಾಣಾಧಿಕಾರಿ ಪೊನ್ನಂಪೇಟೆ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ಲಿಟ್ಲ್ ಫ್ಲವರ್ ಹುದಿಕೇರಿ, ಲಯನ್ಸ್ ಶಾಲೆ ಬಿರುನಾಣಿ ಇಲ್ಲಿನ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ರ್ಯಾಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.