ನಾಪೋಕ್ಲು, ಫೆ. 24: ಪಾಡಿ ಶ್ರೀ ಇಗ್ಗುತಪ್ಪ ದೇವಾಲಯಗಳ ವಾರ್ಷಿಕ ಉತ್ಸವ ಮಾರ್ಚ್ 2 ರಂದು ನಡೆಯಲಿದೆ. ಉತ್ಸವದ ಅಂಗವಾಗಿ ಇತ್ತೀಚೆಗೆ ದೇವಾಲಯದ ಆದಿ ಸ್ಥಳ ಮಲ್ಮ ಬೆಟ್ಟದಲ್ಲಿ ಪಾಡಿ, ನೆಲಜಿ ಹಾಗೂ ಪೇರೂರು ದೇವಾಲಯಗಳ ತಕ್ಕಮುಖ್ಯಸ್ಥರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಟ್ಟು ವಿಧಿಸಲಾಯಿತು.

ದೇವರ ಉತ್ಸವದವರೆಗೆ ತುಲಾಭಾರ ಸೇವೆ, ನಾಮಕರಣ ಸೇರಿದಂತೆ ಇನ್ನಿತರ ಕಾರ್ಯಗಳನ್ನು ನಡೆಸುವದನ್ನು ನಿರ್ಬಂಧಿಸಲಾಗಿದೆ. ಮಾ. 2 ರಂದು ಬೆಳಿಗ್ಗೆ ಎತ್ತುಪೋರಾಟ, ತುಲಾಭಾರ ಸೇವೆ, ವಿಶೇಷ ಪೂಜೆ, ಅನ್ನದಾನ ಹಾಗೂ ದೇವರ ನೃತ್ಯಬಲಿ ಜರುಗಲಿದ್ದು, ದೇವರ ಕಟ್ಟುಪಾಡು ಸಡಿಲಿಸಲಾಗುವದು. ನಾಡಿನ ಭಕ್ತರು ಪದ್ಧತಿ ಪರಂಪರೆಯಂತೆ ಭಕ್ತಿಯಿಂದ ಕಟ್ಟುಪಾಡುಗಳನ್ನು ಆಚರಿಸುವಂತೆ ದೇವಾಲಯದ ಪರವಾಗಿ ದೇವತಕ್ಕರಾದ ಪರದಂಡ ಡಾಲಿ ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.

- ದುಗ್ಗಳ