ಸುಂಟಿಕೊಪ್ಪ, ಫೆ. 24: ಸುಂಟಿಕೊಪ್ಪ ಅಂಬೇಡ್ಕರ್ ಬಡಾವಣೆಯ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.

ಪಿ.ಎಂ.ಜೆ.ಎಸ್.ವೈ. ಹಾಗೂ ರಾಜ್ಯ ಸರಕಾರದ ವಿಶೇಷ ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನತೆಗೆ ಮೀಸಲಿರಿಸಿದ್ದ ಅನುದಾನದಲ್ಲಿ ಸುಂಟಿಕೊಪ್ಪ ಪಂಪ್‍ಹೌಸ್ ರಸ್ತೆಯ ಅಂಬೇಡ್ಕರ್ ಬಡಾವಣೆಗೆ ತೆರಳುವ 220 ಮೀ. ಉದ್ದದ ರೂ. 10 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಸದಸ್ಯರುಗಳಾದ ಬಿ.ಎಂ. ಸುರೇಶ್, ಹೇಮಂತ್ ಕುಮಾರ್, ಸಿ. ಚಂದ್ರನ್, ನಾಗರತ್ನ, ರತ್ನಾ ಜಯನ್, ಶೋಭಾ ರವಿ, ಶಿವಮ್ಮ, ಬಿ.ಜೆ.ಪಿ. ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಬಿ.ಕೆ. ಪ್ರಶಾಂತ್, ನಾಗೇಶ್ ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಮಾಜಿ ಉಪಾಧ್ಯಕ್ಷ ಬಿ.ಕೆ. ಮೋಹನ್, ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷ ಎಂ.ಎಸ್. ರವಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಪೀಟರ್ ಮತ್ತಿತರರು ಇದ್ದರು.