ಒಡೆಯನಪುರ: ಸಮೀಪದ ನಿಡ್ತ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಹಿತ್ತಲಕೇರಿ ಗ್ರಾಮದ ನಿವಾಸಿ ಬಿ.ಸಿ. ಗೌರಮ್ಮ ಮತ್ತು ಸೋಮಯ್ಯ ದಂಪತಿ ತಮ್ಮ ಕುಟುಂಬದ ಹಿರಿಯರ ಜ್ಞಾಪಕಾರ್ಥವಾಗಿ ಶಾಲೆಯ ಮಕ್ಕಳಿಗಾಗಿ ರೂ. 6 ಸಾವಿರ ಮೌಲ್ಯದ ಊಟದ ತಟ್ಟೆ ಮತ್ತು ಲೋಟಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಕುಟುಂಬದ ಸದಸ್ಯರಾದ ಅರುಣ್, ದಯಾನಂದ್, ಶಾಲಾ ಮುಖ್ಯ ಶಿಕ್ಷಕಿ ಯಶೋಧ ಹಾಗೂ ಎಸ್‍ಡಿಎಂಸಿ ಪದಾಧಿಕಾರಿಗಳು ಹಾಜರಿದ್ದರು.