ಸಿದ್ದಾಪುರ, ಮಾ. 5: ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೊಡಗಿನ ಹೊಸೋಕ್ಲು ಚಿಣ್ಣಪ್ಪ 4 ಚಿನ್ನ ಹಾಗೂ ಒಂದು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಮೂಲತಃ ಸಿದ್ದಾಪುರದ ಗುಹ್ಯ ಗ್ರಾಮದ ನಿವಾಸಿ ಹೊಸೋಕ್ಲು ಚಿಣ್ಣಪ್ಪ ಇತ್ತೀಚೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 1500 ಮೀ ಓಟ, 5000 ಮೀ ಓಟ, 10000 ಮೀ ಓಟ ಹಾಗೂ ಸ್ಟೀಪಲ್ ಚೇಸ್‍ನಲ್ಲಿ ಚಿನ್ನ ಮತ್ತು ರಿಲೆಯಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ 2018 ರ ಅಕ್ಟೋಬರ್‍ನಲ್ಲಿ ಸ್ಪೈನ್‍ನಲ್ಲಿ ನಡೆಯುವ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್‍ಗೆ ಆಯ್ಕೆಯಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಹೊಸೋಕ್ಲು ಚಿಣ್ಣಪ್ಪರವರು ಇದೀಗ ಮರಗೋಡುವಿನಲ್ಲಿ ನೆಲೆಸಿದ್ದಾರೆ.