ವೀರಾಜಪೇಟೆ, ಮಾ.5: ವೀರಾಜಪೇಟೆಯ ಲಯನ್ಸ್ ಕ್ಲಬ್ ಹಾಗೂ ಕೊಡವ ಸಮಾಜದ ರಿಕ್ರೀಯೇಶನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ತಾ. 7ರಂದು ಬುಧವಾರ ಬೆಳಿಗ್ಗೆ 9ರಿಂದ ಅಪರಾಹ್ನ 2 ಗಂಟೆವರೆಗೆ ಉಚಿತ ವಾಕ್ ಮತ್ತು ಶ್ರವಣ ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ ತಿಳಿಸಿದ್ದಾರೆ.
ಕೊಡವ ಸಮಾಜದ ರಿಕ್ರಿಯೇಶನ್ ಕ್ಲಬ್‍ನ ಸಭಾಂಗಣದಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು ರಕ್ತ ಪರೀಕ್ಷೆಯನ್ನು ನಡೆಸಲಾಗುವದು ಮೈಸೂರಿನ ಸೌಂಡ್ ಟ್ರೀ ವಾಕ್ ಮತ್ತು ಶ್ರವಣ ಚಿಕಿತ್ಸಾಲಯದ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9880995502 ಸಂಪರ್ಕಿಸಬಹುದು ಎಂದು ವಿಕ್ರಂ ತಿಳಿಸಿದ್ದಾರೆ.