ಕುಶಾಲನಗರ. ಮಾ. 5: ಕಳೆದ ಕೆಲವು ದಿನಗಳಿಂದ ಕುಶಾಲನಗರದ ಸುತ್ತಮುತ್ತ ಅರಣ್ಯದಲ್ಲಿ ಕಂಡುಬಂದ ಬೆಂಕಿ ಬಹುತೇಕ ಶಮನಗೊಂಡಿದೆ. ದುಬಾರೆ ಆನೆಕಾಡು ಮೀನುಕೊಲ್ಲಿ ಮೀಸಲು ಅರಣ್ಯಗಳಲ್ಲಿ ಬೆಂಕಿ ಉಂಟಾಗಿ ಸಾವಿರಾರು ಎಕರೆ ಕಾಡು ಭಸ್ಮವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ತಂಡ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.

ಭಾನುವಾರ ಆನೆಕಾಡು ಮೀಸಲು ಅರಣ್ಯದಲ್ಲಿ ಮತ್ತೆ ಬೆಂಕಿಕಂಡು ಬಂದಿತ್ತು. ಮೈಸೂರು ಕೊಡಗು ಜಿಲ್ಲೆಯ ಗಡಿಭಾಗ ದೊಡ್ಡಹರವೆ ಮೀಸಲು ಅರಣ್ಯದಲ್ಲಿ ಸೋಮವಾರ ಬೆಂಕಿ ಕಾಡಿಗೆ ಆವರಿಸಿದ್ದು ಪಿರಿಯಾಪಟ್ಟಣ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆಂಕಿ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.