ಗೋಣಿಕೊಪ್ಪಲು, ಮಾ.5 : ಈ ಬಾರಿಯ ಬಜೆಟ್ನಲ್ಲಿ ಜೇನುಕುರುಬ ಹಾಗೂ ಸೋಲಿಗ ಜನಾಂಗಕ್ಕೆ ಮಾತ್ರ ಅನುದಾನ ಕಾದಿರಿಸಿದ್ದು ಜಿಲ್ಲೆಯ ಪರಿಶಿಷ್ಟ ಪಂಗಡದ ಪ್ರಾಚೀನ ಬುಡಕಟ್ಟು ಆದಿವಾಸಿ ಯರವ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಕೊಡಗು ಯರವ ಯುವ ಒಕ್ಕೂಟ ಇಂದು ಪೆÇನ್ನಂಪೇಟೆ ಸಾಮಥ್ರ್ಯ ಸೌಧದ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದಲ್ಲದೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ತಾ.ಪಂ. ಇಓ ಜಯಣ್ಣ ಅವರಿಗೆ ನ್ಯಾಯ ಒದಗಿಸಿಕೊಡಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿತು.
ಯರವ ಸಮುದಾಯವನ್ನು ಮೂಲ ನಿವಾಸಿಗಳೆಂದು ಕೇಂದ್ರ ಬುಡಕಟ್ಟು ಮಂತ್ರಾಲಯಕ್ಕೆ ರಾಜ್ಯ ಸಚಿವ ಸಂಪುಟ ಶಿಫಾರಸ್ಸು ಮಾಡಬೇಕು, ಕೊಡಗು ಜಿಲ್ಲೆಯಲ್ಲಿ ಶೇ.75 ರಷ್ಟು ಯರವ ಜನಾಂಗ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದು, ಸ್ವಂತ ನೆಲೆ, ಜಮೀನು ಇರುವದಿಲ್ಲ. ಇದರಿಂದಾಗಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಯರವ ಕುಟುಂಬಕ್ಕೆ ತಲಾ 10 ಎಕರೆ ಜಮೀನನ್ನು 99 ವರ್ಷಕ್ಕೆ ಲೀಸ್ ಆಧಾರದಲ್ಲಿ ನೀಡುವಂತೆ, ಇಲ್ಲಿನ ವಿದ್ಯಾವಂತ ಯುವಕ, ಯುವತಿಯರಿಗೆ ಪ್ರತ್ಯೇಕ ಮೀಸಲಾತಿ ಅನ್ವಯ ಸರ್ಕಾರಿ ಉದ್ಯೋಗ ನೀಡುವಂತೆ, ಪೆÇನ್ನಂಪೇಟೆಯಲ್ಲಿ ಸರ್ಕಾರಿ ಪ.ಪೂ.ಕಾಲೇಜು ಇದ್ದು, ಪದವಿ ಕಾಲೇಜು ಹಾಗೂ ಪರಿಶಿಷ್ಟ ಪಂಗಡದವರಿಗೆ ಕಾಲೇಜು ವಸತಿ ನಿಲಯವನ್ನು ಸ್ಥಾಪಿಸಲು, 2012 ರಿಂದ ಅನ್ವಯವಾಗುವಂತೆ ಪರಿಶಿಷ್ಟ ಪಂಗಡದ ಗ್ರಾ.ಪಂ., ತಾ.ಪಂ. ಜಿ.ಪಂ.ಗೆ ಆಯ್ಕೆಯಾದ ಮಹಿಳಾ ಪ್ರತಿನಿಧಿಗೆ ಮಾಸಿಕ ಕ್ರಮವಾಗಿ ರೂ.10 ಸಾವಿರ, ರೂ.11 ಸಾವಿರ ಹಾಗೂ 15 ಸಾವಿರ ಪಿಂಚಣಿ ನಿಯಮ ಜಾರಿಗೆ ತರುವಂತೆ ಬೇಡಿಕೆ ಮಂಡಿಸಿದರು.
ಮನವಿ ಸ್ವೀಕರಿಸಿದ ಶಾಸಕ ಬೋಪಯ್ಯ ಅವರು ಮುಂಗಡ ಪತ್ರದ ಮೇಲಿನ ಅಧಿವೇಶನ ಮುಗಿದಿದ್ದರೂ, ಈ ಬಗ್ಗೆ ಮುಖ್ಯಮಂತ್ರಿಗಳಲ್ಲಿ ವ್ಯವಹರಿಸಿ, ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗು ವದು ಎಂದು ಹೇಳಿದರು. ಯರವ ಯುವ ಒಕ್ಕೂಟದ ಪರ ಪಿ.ಎಸ್. ಮುತ್ತ, ವೈ.ಬಿ.ಗಣೇಶ್, ವೈ.ಎಂ.ಸಿದ್ಧು, ವೈ.ಸಿ.ಶಂಕರು, ಪಿ.ಬಿ.ರಾಜು, ಹಾಗೂ ಹಲವು ಯರವ ಆದಿವಾಸಿಗಳು ಪಾಲ್ಗೊಂಡಿದ್ದರು. ವೀರಾಜಪೇಟೆ ಪ.ಪಂ. ಅಧ್ಯಕ್ಷ ಇ.ಸಿ. ಜೀವನ್, ಬಿಜೆಪಿ ಪ್ರಮುಖರಾದ ಮಲ್ಲಂಡ ಮಧು ದೇವಯ್ಯ, ಕೆ.ಬಿ.ಗಿರೀಶ್ ಗಣಪತಿ, ಮುಂತಾದವರು ಉಪಸ್ಥಿತರಿದ್ದರು.