ಮಡಿಕೇರಿ, ಮಾ. 5: ಅಂಚೆ ಅದಾಲತ್‍ನ ಸಭೆಯು ತಾ. 13 ರಂದು ಬೆಳಿಗ್ಗೆ 11 ಗಂಟೆಗೆ ಕೊಡಗು ಅಂಚೆ ವಿಭಾಗದ, ವಿಭಾಗೀಯ ಕಚೇರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬಂಧಿಸಿದ ಎಲ್ಲಾ ತರಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ.

ದೂರುಗಳಿದ್ದಲ್ಲಿ ಅಂಚೆ ಅದಾಲತ್ ಎಂದು ಬರೆದು ಅಂಚೆ ಅಧೀಕ್ಷಕರು ಕೊಡಗು ಅಂಚೆ ವಿಭಾಗ ಮಡಿಕೇರಿ ಇವರಿಗೆ ಮಾರ್ಚ್ 9 ರೊಳಗೆ ತಲಪುವಂತೆ ಕಳುಹಿಸಲು ಈ ಮೂಲಕ ಕೋರಲಾಗಿದೆ. ನಂತರ ಮಾರ್ಚ್ 13 ರಂದು ನಡೆಯುವ ಸಭೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಭಾಗವಹಿಸಬಹುದು ಎಂದು ಅಂಚೆ ಅಧೀಕ್ಷಕರು ಕೋರಿದ್ದಾರೆ.