ನಾಪೆÇೀಕ್ಲು, ಮಾ. 5: ಎಲ್ಲೆಡೆಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಕೋಮುವಾದದ ಬಣ್ಣಹಚ್ಚಿ ಗಲಭೆ ನಡೆಸುತ್ತಿರುವ ಕಾಲಘಟ್ಟದಲ್ಲಿ ಕೊಡಗು ಜಿಲ್ಲೆಯ ಎಮ್ಮೆಮಾಡು ಕ್ಷೇತ್ರ ಹಿಂದೂ, ಮುಸ್ಲಿಂ ಭಾವೈಕತೆಯ ಕೇಂದ್ರವಾಗಿದೆ ಎಂದು ರಾಜ್ಯ ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಕಕ್ಕಿಂಜೆಯ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲಿ ಸಖಾಫಿ ಹೇಳಿದರು.
ಎಮ್ಮೆಮಾಡು ಉರೂಸ್‍ನ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿ ದರು. ಇಸ್ಲಾಂ ಧರ್ಮ ಹಿಂದಿ ನಿಂದಲೂ ಪ್ರೀತಿ, ಪ್ರೇಮ, ಶಾಂತಿಯನ್ನು ಜನರಲ್ಲಿ ಬೋೀಧಿಸುತ್ತಾ ಬಂದಿದೆ. ಇಸ್ಲಾಂನಲ್ಲಿ ಜಾತಿ, ಧರ್ಮಗಳ ಬಗ್ಗೆ ಭಿನ್ನಾಭಿಪ್ರಾಯವಿಲ್ಲ ಎಲ್ಲರೂ ಮಾನವರು ಎಂಬುದನ್ನು ಮೊದಲು ನಾವು ತಿಳಿಯಬೇಕು ಎಂದರು. ಪವಾಡ ಪುರುಷರ ಹೆಸರಿನಲ್ಲಿ ಇಂದು ನಡೆಸಲ್ಪಡುವ ಉರೂಸ್‍ಗಳು ಪರಸ್ಪರ ಸ್ನೇಹ, ಪ್ರೀತಿ, ಸೌಹಾರ್ದತೆಯಿಂದ ನೆಮ್ಮದಿಯ ಶಾಂತಿಯುತ ಜೀವನಕ್ಕೆ ಮೆಟ್ಟಿಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೇಕಲ್ ಇಬ್ರಾಹಿಂ ಉಸ್ತಾದ್ ಎಮ್ಮೆಮಾಡು ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಇದಕ್ಕೆ ಇಲ್ಲಿನ ಪವಾಡ ಪುರುಷರು ಸೂಫಿ ಸಂತರೇ ಕಾರಣ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ, ಜಿಲ್ಲಾ ಮುಸ್ಲಿಂ ಸಮಾಜದ ಕೆ.ಎಂ.ಇಬ್ರಾಹಿಂ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿ.ಎಂ.ಉಸ್ಮಾನ್ ಹಾಜಿ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರಹಿಮಾನ್, ಎ.ಡಿ.ಎಲ್.ಆರ್ ಷಂಶುದ್ದೀನ್, ಸಯ್ಯಿದ್ ಇಲ್ಯಾಸ್ ಸಖಾಪಿ ಅಲ್ ಹೈದ್ರೋಸಿ, ಸಯ್ಯಿದ್ ಸಾಲಿಂ ಸಖಾಫಿ ಅಲ್ ಬುಖಾರಿ, ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ, ಜಿಲ್ಲಾ ಪೆÇಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್, ಎಮ್ಮೆಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನೆರೂಟ್ ಆಲಿ ಮತ್ತಿತರರು ಇದ್ದರು. ಉರೂಸ್ ಪ್ರಯುಕ್ತ ಸಾರ್ವಜನಿಕ ಅನ್ನದಾನ ನಡೆಯಿತು.
ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಹುಸೈನ್ ಸಖಾಫಿ ಸ್ವಾಗತಿಸಿ, ಕಾರ್ಯದರ್ಶಿ ಮಹಮ್ಮದ್ ಮುಸ್ಲಿಯಾರ್ ವಂದಿಸಿದರು.
ಬಿಗಿ ಭದ್ರತೆ: ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿತ್ತು. ಬಂದೋಬಸ್ತ್ ನಲ್ಲಿ ಓರ್ವ ಡಿವೈಎಸ್‍ಪಿ, 5 ವೃತ್ತ ನಿರೀಕ್ಷಕರು, 12 ಪಿ.ಎಸ್.ಐ, 29 ಎ.ಎಸ್.ಐ, 180 ಹೆಡ್‍ಕಾನ್ಸ್‍ಸ್ಟೇಬಲ್ ಮತ್ತು ಕಾನ್ಸ್‍ಸ್ಟೇಬಲ್‍ಗಳು, 25 ಮಹಿಳಾ ಸಿಬ್ಬಂದಿ, 1 ಡಿಆರ್ ತುಕಡಿ, 2 ಕೆಎಸ್‍ಆರ್‍ಪಿ ತುಕಡಿಯನ್ನು ಕರ್ತವ್ಯಕ್ಕೆ ನಿಯೋಜನೆ ಗೊಳಿಸಲಾಗಿತ್ತು.