ಮಡಿಕೇರಿ, ಮಾ. 5: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘದ ವತಿಯಿಂದ ಇತ್ತೀಚೆಗೆ ಅಂತರ ಕಾಲೇಜು ಮಟ್ಟದ 2 ದಿನದ “ಲುಮಿನೆನ್ಸ್ 2018-ಫೆಸ್ಟ್” ಕಾರ್ಯಕ್ರಮವನ್ನು ಚಿಕ್ಕಪೇಟೆಯಲ್ಲಿರುವ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಕಟ್ಟಡದ ಆವರಣದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಒಟ್ಟು 16 ತಂಡಗಳು 10 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದರು. ಇದರಲ್ಲಿ ನೆಹರು ಮೆಮೊರಿಯಲ್ ಕಾಲೇಜು, ಸುಳ್ಯ ತಂಡವು ಪ್ರಥಮ ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿಯನ್ನು ಪಡೆದುಕೊಂಡಿತು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೆ.ವಿ.ಜಿ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಪ್ರೋ.ಕೃಷ್ಣಾನಂದ. ವಿಜೇತರಿಗೆ ಟ್ರೋಫಿ ವಿತರಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಕೆ. ಬೋಪಯ್ಯ, ಸಹಾಯಕ ಪ್ರಾಧ್ಯಾಪಕರುಗಳಾದ ವೇಣುಗೋಪಾಲ್ ಎಚ್.ಎಸ್, ಸುನುತ ಎಂ.ಎಂ. ಮಂಜುನಾಥ್ ಆರ್, ಫೆಸ್ಟ್ನ ವಿದ್ಯಾರ್ಥಿ ಪ್ರತಿನಿಧಿಗಳಾದ ರುಚಿತ್ಕುಮಾರ್, ಮತ್ತು ಕು. ಶಫೀಕ್ ಎ.ಎ ಇತರರು ಇದ್ದರು.