ಕುಶಾಲನಗರ, ಮಾ. 5: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ ನಿರ್ಮಾಣ ಮಾಡುವ ಚಿಂತನೆ ಹರಿಸಲಾಗಿದೆ ಎಂದು ಎಸ್‍ಎಲ್‍ಎನ್ ಸಮೂಹ ಸಂಸ್ಥೆಯ ಪ್ರಮುಖರಾದ ಸಾತಪ್ಪನ್ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಇತ್ತೀಚೆಗೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭದ ಯಶಸ್ಸಿನಲ್ಲಿ ಕೈ ಜೋಡಿಸಿದ ಪ್ರಮುಖ ಸಂಘ ಸಂಸ್ಥೆ ಗಳ ಪದಾಧಿಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾವರೆಕೆರೆ ಬಳಿ ನಡೆದ ಪೂಜೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು ಕುಶಾಲನಗರ ದೇವಾಲಯ ಒಕ್ಕೂಟ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖ ಪಾತ್ರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ದೇವಾಲಯ ನಿರ್ಮಾಣಕ್ಕೆ ಪ್ರಶಸ್ತ ಸ್ಥಳದ ನಿರೀಕ್ಷೆಯಲ್ಲಿ ಇರುವದಾಗಿ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಎಸ್‍ಎಲ್‍ಎನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್, ಅಂದಾಜು 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ವಿವರಿಸಿ ದರು.
ಪರ್ಪಲ್ ಫಾರ್ಮ್ ರೆಸಾರ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ದೇವಾಲಯ ಒಕ್ಕೂಟದ ಅಧ್ಯಕ್ಷರಾದ ಎಂ.ಕೆ. ದಿನೇಶ್, ಪ್ರಧಾನ ಕಾರ್ಯದರ್ಶಿ ಎಂ. ಎನ್. ಚಂದ್ರಮೋಹನ್, ಕನ್ನಿಕಾ ಪರಮೇಶ್ವರಿ ದೇವಾಲಯದ ಅಧ್ಯಕ್ಷÀ ಬಿ. ಎಲ್. ಸತ್ಯನಾರಾಯಣ, ವಿ.ಪಿ.ನಾಗೇಶ್, ಬಿ. ಆರ್. ನಾಗೇಂದ್ರಪ್ರಸಾದ್, ಕಲ್ಯಾಣೋತ್ಸವ ಸಮಿತಿ ಪ್ರಮುಖರಾದ ಎಸ್. ಕೆ. ಸತೀಶ್, ಅಮೃತ್‍ರಾಜ್, ಜಿ. ಎಲ್. ನಾಗರಾಜ್, ಕೆ. ಎನ್. ಸುರೇಶ್, ಪುಂಡರೀಕಾಕ್ಷ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭ ಕಾರ್ಯಕ್ರಮದ ಸಮಿತಿ ಪದಾಧಿಕಾರಿಗಳನ್ನು ಎಸ್‍ಎಲ್‍ಎನ್ ಸಮೂಹ ಸಂಸ್ಥೆ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.