ನಾಪೆÇೀಕ್ಲು, ಮಾ. 5: ನೆಲಜಿ ಇಗ್ಗುತ್ತಪ್ಪ ದೇವಾಲಯ ಜೀರ್ಣೋದ್ಧಾರ ಸಮಿತಿಯವರ ಅವಿರತ ಶ್ರಮದ ಫಲವಾಗಿ ದಾನಿಗಳ, ಸಂಘಸಂಸ್ಥೆಗಳ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಪ್ರಯತ್ನದಿಂದ ಮಲೆನಾಡು ಅಭಿವೃದ್ಧಿ ಸಮಿತಿ ಮೂಲಕ 10 ಲಕ್ಷ ರೂ. ಒಟ್ಟು ಸೇರಿ 60 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ನೂತನ ಪ್ರವೇಶದ್ವಾರ, ಪೌಳಿ,ಬೋಜನಶಾಲೆ, ಅಡುಗೆ ಮನೆ, ಅರ್ಚಕರ ನಿವಾಸ ವಿವಿಧ ಕಟ್ಟಡಗಳನ್ನು ಲೋಕಾರ್ಪಣೆ ಗೊಳಿಸಲಾಯಿತು. ಬೆಳಿಗ್ಗೆ ಗಣಪತಿ ಹೋಮ,ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಚಾಲನೆ ನೀಡಲಾಯಿತು.
ದೇವಾಲಯದ ಪ್ರವೇಶದ್ವಾರ ವನ್ನು ಗಾಳಿಬೀಡಿನ ಎಂ.ಎಸ್. ರಾಮರಾವ್ ಮತ್ತು ಸಂಸಾರ ಉದ್ಘಾಟಿಸಿದರು. ಪೌಳಿಯನ್ನು ದಾನಿಗಳಾದ ಮೂವೇರ ಡಾಲಿ ಉತ್ತಪ್ಪ ಮತ್ತು ಸಂಸಾರ ಉದ್ಘಾಟಿಸಿ ಆ ಬಳಿಕ ಅಡುಗೆ ಮನೆ ಮತ್ತು ಭೋಜನಶಾಲೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಡೀರ ನಂದಾ ನಂಜಪ್ಪ ಹಾಗೂ ಮುಕ್ಕಾಟಿರ ವಿನಯ್, ಚಿಯಕ ಪೂವಂಡ ಅಪ್ಪಚ್ಚು, ಮಣವಟ್ಟಿರ ಪಾಪು ಚಂಗಪ್ಪ, ಅಪ್ಪ್ಪುಮಣಿಯಂಡ ಸನ್ನು ಸೋಮಣ್ಣ, ಮಾಳೆಯಂಡ ಅಯ್ಯಪ್ಪ, ಬದ್ದಂಚೆಟ್ಟೀರ ದೇವಿದೇವಯ್ಯ, ಮಾಳೆಯಂಡ ಕುಟ್ಟಪ್ಪ ಉದ್ಘಾಟಿಸಿದರು. ಅರ್ಚಕರ ನಿವಾಸವನ್ನು ದೇವಾಲಯದ ತಕ್ಕಮುಖ್ಯಸ್ಥ ಬದ್ದಂಚೆಟ್ಟೀರ ನಾಣಯ್ಯ, ನಾಪನೆರವಂಡ ಪೊನ್ನಪ್ಪ, ಬಾಳೆಯಡ ಉತ್ತಪ್ಪ, ಕೈಬುಲಿರ ರಮೇಶ್ ನೆರವೇರಿಸಿದರು. ಅರ್ಚಕ ರಮೇಶ್ ಶರ್ಮ ಮತ್ತು ಸುರೇಶರ್ಮ ಪೂಜಾ ಕೈಂಕರ್ಯ ನೆರವೇರಿಸಿದರು. ಈ ಸಂದರ್ಭ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಊರಿನ ಹಾಗೂ ಪರ ಊರಿನ ಭಕ್ತರು ಪಾಲ್ಗೊಂಡಿದ್ದರು.
-ದುಗ್ಗಳ