ಸೋಮವಾರಪೇಟೆ, ಮಾ. 5: ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕ ಮಹಿಳೆಯರು ಭಾಗವಹಿಸಿದ್ದರು.
ಬಸ್ ಹುಡುಕಾಟ, ಪಾಸಿಂಗ್ ದ ಬಾಲ್, ಭಾರದ ಗುಂಡು ಎಸೆತ, ವೇಗದ ನಡಿಗೆ, ನಿಂಬೆ-ಚಮಚ ಓಟ ಸ್ಪರ್ಧೆಗಳಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಸ್. ಮಹೇಶ್, ಮೇಲ್ವಿಚಾರಕಿ ಶೀಲಾ, ಸ್ತ್ರೀ ಶಕ್ತಿ ಸಂಘದ ಜಿಲ್ಲಾಧ್ಯಕ್ಷೆ ಮೇರಿ ಅಂಬುದಾಸ್, ರಾಜ್ಯ ಸಮಿತಿ ನಿರ್ದೇಶಕಿ ರೆಹಾನ ಫಿರೋಜ್,ಪ್ರೇಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
35 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ನಡೆದ ಬಸ್ ಹುಡುಕಾಟ ಸ್ಪರ್ಧೆಯಲ್ಲಿ ಹೆಮ್ಮನೆಯ ಫಾತಿಮ ಪ್ರಥಮ, ಕಿಬ್ಬೆಟ್ಟದ ಮೋಹಿನಿ ದ್ವಿತೀಯ, ಸುಂಟಿಕೊಪ್ಪದ ಮೀನಾ ತೃತೀಯ ಸ್ಥಾನ ಗಳಿಸಿದರು. ವೇಗದ ನಡಿಗೆಯಲ್ಲಿ ಸಿಡಿಪಿಓ ಕಚೇರಿಯ ಕೆ.ಶೀಲಾ, ಸುಂಟಿಕೊಪ್ಪದ ಮುನಿಯಮ್ಮ, ಬಸವನಕೊಪ್ಪದ ಪುಷ್ಪಾವತಿ, ಪಾಸಿಂಗ್ ದ ಬಾಲ್ ಸ್ಪರ್ಧೆಯಲ್ಲಿ ತಣ್ಣೀರುಹಳ್ಳದ ಹರ್ಷಿಣಿ, ತಲ್ತರೆಶೆಟ್ಟಳ್ಳಿಯ ಶಾರದ, ಲಕ್ಕೇರಿ ಪೈಸಾರಿಯ ವತ್ಸಲ ಅವರುಗಳು ಸ್ಥಾನ ಗಳಿಸಿದರು. ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ವಿರೂಪಾಕ್ಷಪುರದ ಲತ, ತಣ್ಣೀರುಹಳ್ಳದ ಮೋಹಿನಿ, ಬಡುಬನಹಳ್ಳಿಯ ಚಂದ್ರಲೇಖ, ನಿಂಬೆ-ಚಮಚ ಓಟದಲ್ಲಿ ವಿರೂಪಾಕ್ಷಪುರದ ಕೆ.ವಿ. ಲತಾ,ಎ.ಎಂ. ಇಂದ್ರಾಣಿ, 7ನೇ ಹೊಸತೋಟದ ಮೋಹನಾಕ್ಷಿ, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಶಾರದ, ಇಂದ್ರಾಣಿ, ತಲ್ತರೆಶೆಟ್ಟಳ್ಳಿಯ ಶಾರದ ಅವರುಗಳು ಜಯ ಗಳಿಸಿದರು. 18 ರಿಂದ 35 ವರ್ಷ ವಯೋಮಾನದ ಮಹಿಳೆಯರಿಗೆ ನಡೆದ ಪಾಸಿಂಗ್ ದ ಬಾಲ್ ಸ್ಪರ್ಧೆಯಲ್ಲಿ ಬೆಟ್ಟದಳ್ಳಿಯ ಪ್ರಿಯಾ, ಬಸವನಹಳ್ಳಿಯ ಪ್ರೀತು, ಬೆಟ್ಟದಳ್ಳಿಯ ಪ್ರೀತಿ, ಸಂಗೀತ ಕುರ್ಚಿಯಲ್ಲಿ ಬೆಟ್ಟದಳ್ಳಿಯ ಹರಿಣಿ, ಕಾವ್ಯ, ಒಡೆಯನಪುರದ ಸುಮಿತ್ರ, ಭಾರದ ಗುಂಡು ಎಸೆತದಲ್ಲಿ ಪ್ರೀತಿ, ಸುಮಿತ್ರ, ಪ್ರಿಯಾ, ನಿಂಬೆ-ಚಮಚ ಓಟದಲ್ಲಿ ಶೋಭ, ಹರಿಣಿ, ರಜನಿ ಅವರುಗಳು ಸ್ಥಾನಗಳಿಸಿದರು.