ನಾಪೆÉÇೀಕ್ಲು, ಮಾ. 5 : ಕರ್ನಾಟಕ ರಾಜ್ಯದಿಂದ 2016 - 17 ನೇ ಸಾಲಿನ ಪ್ರಧಾನ ಮಂತ್ರಿಗಳ ಶ್ರಮಾ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದ ವೀರಾಜಪೇಟೆ ನಿವಾಸಿ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಬಿ.ಇ.ಎಂ.ಎಲ್. ಉದ್ಯೋಗಿ ತಟ್ಟಂಡ ಹರೀಶ್ ತಮ್ಮಯ್ಯ ಅವರು ದೆಹಲಿಯ ವಿಜಾÐನ ಭವನದಲ್ಲಿ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.