ನಾಪೋಕ್ಲು, ಮಾ. 10: ನಾಲಡಿ ಗ್ರಾಮದ ತೋಟಗಳಿಗೆ ನಿರಂತರವಾಗಿ ಕಾಡಾನೆಗಳು ಧಾಳಿ ಇಡುತ್ತಿದ್ದು ಅಪಾರ ನಷ್ಟ ಸಂಭವಿಸಿದೆ. ಕಳೆದ ಎರಡು ತಿಂಗಳಿನಿಂದ ತೋಟಗಳಿಗೆ ನಿರಂತರವಾಗಿ ಧಾಳಿ ಮಾಡುತ್ತಿರುವ 5 ಕಾಡಾನೆಗಳು ತೆಂಗು, ಅಡಿಕೆ, ಬಾಳೆ, ಕಾಫಿ ಸೇರಿದಂತೆ ವಿವಿಧ ಫಸಲುಗಳನ್ನು ನಷ್ಟಪಡಿಸುತ್ತಿದ್ದು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ರಾತ್ರಿ ಇದೇ ಗ್ರಾಮದ ನಿವಾಸಿಗಳಾದ ಪುದಿಯಮನೆ ಕೃಷ್ಣ್ಪ, ನಾರಾಯಣ, ಪದ್ಮನಾಭ, ಬೊಳಿಯಾಡಿರ ಡಾಲಿ, ವಿಜು, ಪಟ್ಟೆಮನೆ ವೇಣುಗೋಪಾಲ, ಹಾಗೂ ಗಣೇಶ, ಇವರ ತೋಟಗಳಿಗೆ ಕಾಡಾನೆಗಳು ಧಾಳಿ ಮಾಡಿ ತೆಂಗು, ಅಡಿಕೆ, ಬಾಳೆ, ಕಾಫಿ ಸೇರಿದಂತೆ ವಿವಿಧ ಫಸಲುಗಳನ್ನು ನಷ್ಟಪಡಿಸಿವೆ. ಸುಮಾರು ಎರಡು ತಿಂಗಳಿನಿಂದ ಕಾಡಾನೆಗಳ ನಿರಂತರ ಹಾವಳಿಯಿಂದ ಕಂಗೆಟ್ಟಿದ್ದು ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ದುಗ್ಗಳ