ಸುಂಟಿಕೊಪ್ಪ, ಮಾ.10: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ 2017-18ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯು ತಾ.15 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾ.ಪಂ. ಅಧ್ಯಕ್ಷ ವಿ.ಆರ್. ರಂಜನಿ ಅವರ ಅಧ್ಯಕ್ಷತೆಯಲ್ಲಿ ಕಾನ್‍ಬೈಲ್ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯೆ ಕುಮುದಾ ಧರ್ಮಪ್ಪ,ತಾ.ಪಂ.ಸದಸ್ಯೆ ಹೆಚ್.ಡಿ.ಮಣಿ, ನೋಡಲ್ ಅಧಿಕಾರಿ ಪಿ.ಎಸ್.ಬೋಪಯ್ಯ ಭಾಗವಹಿಸಲಿದ್ದಾರೆ.