*ಗೋಣಿಕೊಪ್ಪಲು, ಮಾ. 10 : ಅಖಿಲ ಭಾರತೀಯ ಅಂತರ್ ವಿಶ್ವವಿದ್ಯಾಲಯ ಆಯೋಜಿಸಿದ ನೆಟ್‍ಬಾಲ್ ಪಂದ್ಯಾವಳಿಯಲ್ಲಿ ಕೊಡಗಿನ ಮುತ್ತಮ್ಮ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.
ಮಂಗಳೂರಿನ ವಿಶ್ವವಿದ್ಯಾಲಯ ತಂಡದ ನಾಯಕತ್ವದ ನೇತೃತ್ವ ವಹಿಸಿದ್ದ ಮುತ್ತಮ್ಮ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲು ಕಾರಣರಾಗಿದ್ದಾರೆ. ಉಜಿರೆ ಎಸ್.ಡಿ.ಎಂ.ಸಿ. ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಎಂ.ವಿ. ಮುತ್ತಮ್ಮ ಪೆÇರಾಡು ಗ್ರಾಮದ ಮಿದೇರಿರ ವಸಂತ್ ಕುಮಾರ್, ಕವಿತ ದಂಪತಿಯ ಪುತ್ರಿ.