ಮಡಿಕೇರಿ, ಮಾ. 10: ಕುಶಾಲನಗರ ಮಾರುಕಟ್ಟೆ ಬಳಿಯ ನಿವಾಸಿ ರಂಜಿತ್ ಎಂಬವರ ಬೈಕ್‍ಗೆ (ಕೆಎ 12 ಹೆಚ್-5483) ಅಲ್ಲಿನ ಮಾದಾಪಟ್ಟಣ ನಿವಾಸಿ ವಿನಿತ್ ಎಂಬಾತ ತನ್ನ ಬೈಕ್ (ಕೆಎಂ5-ಹೆಚ್‍ಜಿ-6527) ಡಿಕ್ಕಿಪಡಿಸಿದ ಘಟನೆ ಬೈಚನಹಳ್ಳಿ ಹೆದ್ದಾರಿಯಲ್ಲಿ ಸಂಭವಿಸಿದೆ. ಪರಿಣಾಮ ರಂಜಿತ್ ಕಾಲು ಮೂಳೆ ಮುರಿದು ಮೈಸೂರಿನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ವಿನಿತ್ ವಿರುದ್ಧ ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.