ಮಡಿಕೇರಿ, ಮಾ. 10: ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೂಲತಃ ಹೆಚ್.ಡಿ. ಕೋಟೆಯ ನಿವಾಸಿಯಾಗಿದ್ದ ಗೀತಾ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕೆಲ ಸಮಯದ ಹಿಂದೆ ಪತಿ ನಾಗರಾಜು ಎಂಬಾತನನ್ನು ತೊರೆದು ಗೋಪಾಲ ಎಂಬಾತನೊಂದಿಗೆ ನಗರಕ್ಕೆ ಆಗಮಿಸಿ ವಾಸ ಮಾಡಿಕೊಂಡಿದ್ದ ಗೀತಾ ನೇಣಿಗೆ ಶರಣಾಗಿದ್ದು, ಗೋಪಾಲನ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದ್ದು, ಮಡಿಕೇರಿ ನಗರ ಪೊಲೀಸರು ಗೋಪಾಲನನ್ನು ಬಂಧಿಸಿದ್ದಾರೆ. ಮೃತೆ ಗೀತಾಗೆ ಇಬ್ಬರು ಮಕ್ಕಳಿದ್ದಾರೆ.