ವೀರಾಜಪೇಟೆ, ಮಾ. 10: ವೀರಾಜಪೇಟೆ ಲಯನ್ಸ್ ಕ್ಲಬ್ ಹಾಗೂ ಕೊಡವ ಸಮಾಜದ ಸ್ಪೋಟ್ರ್ಸ್ ಮತ್ತು ರಿಕ್ರೀಯೇಶನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ವಾಕ್-ಶ್ರವಣ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಒಟ್ಟು 112 ಮಂದಿಗೆ ತಜ್ಞ ವೈದ್ಯರು ವಾಕ್ ಮತ್ತು ಶ್ರವಣ ಪರೀಕ್ಷೆ ಮಾಡಿ ಸಲಹೆ ನೀಡಿದರು. ಕೊಡವ ಸಮಾಜ ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಪ್ರಭು ದೇವಯ್ಯ, ಲಯನ್ಸ್ ಕ್ಲಬ್‍ನ ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ, ಬಲ್ಲಚಂಡ ಅಶ್ವಥ್ ಗಣಪತಿ, ಪಿ. ಸುಬ್ಬಯ್ಯ ಇತರರು ಪಾಲ್ಗೊಂಡಿದ್ದರು.