ಸಿದ್ದಾಪುರ, ಮಾ.10: ಹಣ ದುರುಪಯೋಗ ಪಡಿಸಿದ ಗ್ರಾಮ ಪಂಚಾಯತಿ ಪಿಡಿಓ ಒಬ್ಬರಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಸಿಇಓ ಆದೇಶ ಪತ್ರ ನೀಡಿದ್ದಾರೆ. ಪಿಡಿಓ ಪೂಣಚ್ಚ ಎಂಬವರು ಮಾಲ್ದಾರೆ ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಪಡಿಸಿ ಹಗರಣ ನಡೆಸಿದ ಆರೋಪ ಎದುರಿಸುತ್ತಿದ್ದರು. ಈ ಅವ್ಯವಹಾರದ ಬಗ್ಗೆ ಮಾಲ್ದಾರೆ ಗ್ರಾ.ಪಂ. ಮಾಜಿ ಅಧ್ಯಕ್ಷರೊಬ್ಬರು ಹಾಗೂ ಗ್ರಾಮಸ್ಥರು ಪೂಣಚ್ಚ ಅವರ ವಿರುದ್ಧ ದಾಖಲೆಯೊಂದಿಗೆ ಲೋಕಾಯುಕ್ತ ಸೇರಿದಂತೆ ಮೇಲಾಧಿಕಾರಿಗಳಿಗೆ ಹಲವಾರು ಬಾರಿ ಪುಕಾರು ನೀಡಿದ್ದರು.
ಇದೀಗ ಪೂಣಚ್ಚ ಅವರು ಹಣ ದುರುಪಯೋಗ ಪಡಿಸಿರುವದು ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರು ಪೂಣಚ್ಚ ಅವರಿಗೆ ಕಡ್ಡಾಯ ನಿವೃತ್ತಿ ಹೊಂದುವಂತೆ ಆದೇಶ ಪತ್ರ ನೀಡಿದ್ದಾರೆ. ಮಾಲ್ದಾರೆಯಲ್ಲಿ ಹಗರಣ ನಡೆಸಿದ ಪಿಡಿಓ ಪೂಣಚ್ಚ ಅವರು ಹಾಲಿ ಕಣ್ಣಾಂಗಾಲ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.