ಕುಶಾಲನಗರ, ಮಾ. 10: ಕುಶಾಲನಗರ ಸಮೀಪ ಕೊಪ್ಪ ಕಾವೇರಿ ನದಿ ತಟದಲ್ಲಿ ಇಂದು ಸಂಜೆ ಬೆಂಕಿ ಅನಾಹುತ ನಡೆದಿದೆ. ಕಾವೇರಿ ನದಿ ಸೇತುವೆಯ ಬಳಿಯಿರುವ ಬಿದಿರು ಮೆಳೆಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚುವದರೊಂದಿಗೆ ನದಿಯುದ್ದಕ್ಕೂ ಬೆಂಕಿ ಆವರಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಕುಶಾಲನಗರ ಅಗ್ನಿಶಾಮಕ ಮತ್ತು ತುರ್ತು ಸೇವೆ ವಿಭಾಗದ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಬೆಂಕಿಯನ್ನು ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.