ಗೋಣಿಕೊಪ್ಪ ವರದಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಲ್ಲಿನ ಕಾವೇರಿ ಮಹಿಳಾ ಸಮಾಜದ ವತಿಯಿಂದ ಆಚರಿಸಲಾಯಿತು. ಸಮಾಜದ ಸದಸ್ಯರುಗಳಿಗೆ ವಿವಿಧ ಕ್ರೀಡಾಕೂಟ ನಡೆಯಿತು. ಸಾಧಕ ಮಹಿಳೆಯರಿಗೆ ಸನ್ಮಾನ, ಮಹಿಳಾ ಸಬಲೀಕರಣದ ಬಗ್ಗೆ ವಿಚಾರ ಮಂಡನೆ ನಡೆಸಲಾಯಿತು. ಕ್ರೀಡಾಪಟು ಮೊಣ್ಣಂಡ ವಸಂತಿ ಅಪ್ಪಚ್ಚು ಮತ್ತು ಮಾರಮಾಡ ಮಾಚಮ್ಮ ಹಾಗೂ ಛಾಯಗ್ರಾಹಕಿ ಜಯಲಕ್ಷ್ಮಿ ಅವರುಗಳನ್ನು ಸನ್ಮಾನಿಸಲಾಯಿತು. ಮಹಿಳಾ ಸಬಲೀಕರಣದ ಬಗ್ಗೆ ಹಿರಿಯ ಮಹಿಳೆ ಜಮ್ಮಡ ಶಾಂತಿ ಅಪ್ಪಚ್ಚು ಮಾತನಾಡಿ, ಮಹಿಳೆಯರು ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದಾಳೆ. ಇದು ಅವರ ಸ್ವಾವಲಂಬನೆಯ ಬದುಕಿಗೆ ವೇದಿಕೆಯಾಗುತ್ತಿದೆ. ಸಮತೋಲನದಲ್ಲಿ ಜೀವನ ನಿಭಾಯಿಸುವ ಶಕ್ತಿ ಹೊಂದಿದ್ದಾಳೆ ಎಂದರು.

ಮಹಿಳೆಯರಿಗೆ ನಡೆದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಿನ್ ಗೇಮ್ ಸ್ಪರ್ಧೆಯಲ್ಲಿ ಧನಲಕ್ಷ್ಮಿ (ಪ್ರ), ರೀಟಾ ಸುಮನ್ (ದ್ವಿ), ಬಕೆಟ್ ಗ್ಲಾಸ್ ಕಾಯಿನ್‍ನಲ್ಲಿ ಜಮ್ಮಡ ಶಾಂತಿ ಮಾಚಯ್ಯ (ಪ್ರ), ಕಾವೇರಿ ಮಣಿ (ದ್ವಿ), ಬರ್ತ್ ಡೇ ಗೇಮ್‍ನಲ್ಲಿ ರಾಧ (ಪ್ರ), ಕೊಣಿಯಂಡ ಬೋಜಮ್ಮ ಉತ್ತಪ್ಪ (ದ್ವಿ), ಬಾಂಬಿಂಗ್ ಇನ್ ದಿ ಸಿಟಿಯಲ್ಲಿ ಧನಲಕ್ಷ್ಮಿ (ಪ್ರ), ವಿಜಯಲಕ್ಷ್ಮಿ ಶಶಿಧರ್ (ದ್ವಿ), ಗಾದೆ ವಿಸ್ತರಣೆಯಲ್ಲಿ ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ (ಪ್ರ), ರತಿ ಅಚ್ಚಪ್ಪ (ದ್ವಿ) ಸ್ಥಾನ ಪಡೆದುಕೊಂಡರು. ಲಕ್ಕಿ ಮಹಿಳೆ ವಿಭಾಗದಲ್ಲಿ ಸಂಧ್ಯಾ ಬಹುಮಾನ ಪಡೆದುಕೊಂಡರು.

ಈ ಸಂದರ್ಭ ಮಹಿಳಾ ಸಮಾಜದ ಅಧ್ಯಕ್ಷೆ ಉತ್ತರೆ ಅಪ್ಪಚ್ಚು, ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ, ಪದಾಧಿಕಾರಿ ಕೊಂಗಂಡ ಶಾಂತಿ ಅಪ್ಪಚ್ಚು ಹಾಗೂ ಸ್ಥಾಪಕ ಅಧ್ಯಕ್ಷೆ ಕಮಲು ಅಪ್ಪಯ್ಯ ಉಪಸ್ಥಿತರಿದ್ದರು.