ಮಡಿಕೇರಿ, ಮಾ. 10: ಕೊಡಗು ಜಿಲ್ಲೆ ಮೂಲಕ ತಲಚೇರಿ- ಮೈಸೂರು ರೈಲು ಮಾರ್ಗ ಸ್ಥಾಪನೆಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ವಿರೋಧ, ರಾಷ್ಟ್ರ ಮಟ್ಟಗಳಲ್ಲಿ ಚರ್ಚೆಗಳು ನಡೆದಿವೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಈ ರೈಲು ಮಾರ್ಗಕ್ಕೆ ಹಸಿರು ನಿಶಾನೆ ನೀಡುವದಿಲ್ಲ ಎಂದು ಕೊಡಗಿನ ನಿಯೋಗಗಳಿಗೆ ಭರವಸೆ ನೀಡಿದ್ದಾರೆ. ಈ ನಡುವೆ, ಮೆಟ್ರೋ ರೈಲಿನ ಪ್ರಮುಖ ವ್ಯಕ್ತಿಯೊಬ್ಬರು ರೈಲು ಯೋಜನೆಗೆ ಕೇರಳ ಸರಕಾರಕ್ಕೆ ನೀಡಬೇಕಿದ್ದ ತಾಂತ್ರಿಕ ಸಹಕಾರವನ್ನು ಹಿಂತೆಗೆದುಕೊಂಡಿದ್ದಾರೆ. ಕೇರಳದ ಮುಖ್ಯ ಮಂತ್ರಿ ಪಿನರಾಯಿ ವಿಜಯನ್ ನಿಲುವಿನ ವಿರುದ್ಧವೇ ಈ ಪ್ರಮುಖ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಲಚೇರಿ-ಮೈಸೂರು ರೈಲು ಮಾರ್ಗ ನಿರ್ಮಾಣಕ್ಕೆ ಕೇರಳದ ಮುಖ್ಯ ಮಂತ್ರಿ ಪಿನರಾಯಿ ವಿಜಯನ್ ಅವರು ಈ ಹಿಂದೆ ಆಸಕ್ತಿ ವಹಿಸಿದ್ದು ಸರಕಾರೀ ಅಧೀನ ಸಂಸ್ಥೆಯಾದ ಡೆಲ್ಲಿ ಮೆಟ್ರೋ ರೈಲು ಕಾರ್ಪೋರೇಷನ್ (ಡಿ.ಎಂ.ಆರ್. ಸಿ) ಈ ಯೋಜನೆಯನ್ನು ಜಾರಿ ಗೊಳಿಸಲು ಸಹಕಾರ ಬಯಸಿದ್ದರು. ಇದಕ್ಕಾಗಿ ಡಿ.ಎಂ.ಆರ್.ಸಿ ಸಂಸ್ಥೆ ತಯಾರಿ ನಡೆಸಿತ್ತು. ಈ ಯೋಜನೆಯ ಜಾರಿಗೆ ಮುನ್ನ ಮುಖ್ಯವಾಗಿ ಬೇಕಾದುದು ಈ ಯೋಜನೆ ಸಮರ್ಥ ಎಂಬದಕ್ಕೆ ಸಕಾರಾತ್ಮಕ ವರದಿ. ಆದರೆ,ವಿವರವಾದ ಸಮೀಕ್ಷೆ ಬಳಿಕ ಡಿ.ಎಂ.ಆರ್. ಸಿ ಸಂಸ್ಥೆ ತಲಚೇರಿ- ಮೈಸೂರು ರೈಲು ಯೋಜನೆ ಸಮರ್ಥ ವಲ್ಲ, ಇದು ನಿಷ್ಪ್ರಯೋಜನಕಾರಿ ಎಂದು ಡಿಂ.ಆರ್. ಸಿ.ಸಂಸ್ಥೆ ಕೇರಳ ಸರಕಾರಕ್ಕೆ ವರದಿ ನೀಡಿತು. ಕೇರಳ ರಾಜ್ಯದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರಿಗೆ ಮಾತ್ರ ಇದರ ಪ್ರಯೋಜನವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತ್ತು. ಉಳಿದವರಿಗೆ ಈ ಯೋಜನೆ ನಿಷ್ಪ್ರಯೋಜಕ ಎಂದು ತನ್ನ ವರದಿಯಲ್ಲಿ ಸ್ಪಷ್ಟಪಡಿಸಿತ್ತು. ವರದಿ ನೀಡಿದ ಬಳಿಕ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ತನ್ನ ಹಾಗೂ ಡಿಎಂ.ಆರ್.ಸಿ. ಸಂಸ್ಥೆ ವಿರುದ್ಧ ಆಕ್ರೋಶಗೊಂಡಿದ್ದರು ಎಂದು ಡಿಎಂಆರ್‍ಸಿ ಪ್ರಧಾನ ಸಲಹೆಗಾರ ರಾದ ಈ. ಶ್ರೀಧರನ್ ಬಹಿರಂಗ ಹೇಳಿಕೆಯಿತ್ತಿದ್ದಾರೆ. ತನ್ನ ಮೇಲಿನ ಈ ಸಿಟ್ಟಿನಿಂದಾಗಿ ಮುಖ್ಯಮಂತ್ರಿ ಪಿನರಾಯಿ ಅವರು ಕೇರಳದಲ್ಲಿ ಲೈಟ್ ಮೆಟ್ರೋ ಯೋಜನೆಗಳ ಕುರಿತೂ ಅನಾಸಕ್ತರಾಗಿದ್ದಾರೆ. ತಾನು ಸಂಸ್ಥೆ ಪರವಾಗಿ ತಿರವನಂತಪುರ ಮತ್ತು ಕೋಝಿಕೋಡ್‍ಗಳಲ್ಲಿ ಲೈಟ್ ಮೆಟ್ರೋ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ತಮ್ಮ ಸಂಸ್ಥೆಗೆ ಮುಖಮಂತ್ರಿಯವರು ವಹಿಸಿದ್ದುದನ್ನು ಸಮರ್ಪಕವಾಗಿ ನಡೆಸಿಕೊಂಡು ಬಂದಿದ್ದೆ. ಆದರೆ, ಈಗ ಮುಖ್ಯಮಂತ್ರಿಯವರು ಅದರ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ತಾನು ತಲಚೇರಿ- ಮೈಸೂರು ರೈಲು ಮಾರ್ಗಕ್ಕೆ ನಕಾರ ವ್ಯಕ್ತಪಡಿಸಿದುದೇ ಅವರ ಸಿಟ್ಟಿಗೆ ಮುಖ್ಯ ಕಾರಣ ಎಂದು ತಮ್ಮ ಗಮನಕ್ಕೆÉ ಬಂದಿದೆ ಎಂದು ಶ್ರೀಧರನ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಕೇರಳ ಸರಕಾರದ ಈ ಎಲ್ಲ ಯೋಜನೆಗಳಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಶ್ರೀಧರನ್ ಸ್ಪಷ್ಟಪಡಿಸಿದ್ದಾರೆÀ. ಈಗಾಗಲೇ ಕೇರಳದಲ್ಲಿ ತನ್ನ ಸಂಸ್ಥೆಯ ಎರಡು ಕÀಚೇರಿಗಳನ್ನು ತೆರೆದಿದ್ದು ತಿಂಗಳಿಗೆ ರೂ. 16 ಲಕ್ಷ ಅನವಶ್ಯಕ ವೆÀಚ್ಚವಾಗು ತ್ತಿದೆ. ಕೇರಳದ ಮೆಟ್ರೋ ಯೋಜನೆ ಕುರಿತೂ ಮುಖ್ಯಮಂತ್ರಿ ಮೌನ ವಹಿಸಿದ್ದಾರೆ, ಈ ಹಿನ್ನೆಲೆಯಲ್ಲಿ ತಾನು ಎಲ್ಲ ಯೋಜನೆಗಳಿಂದ ಹಿಂದಕ್ಕೆ ಸರಿಯುತ್ತಿರುವದಾಗಿಯೂ ಶ್ರೀಧರನ್ ಸ್ಪಷ್ಟಪಡಿಸಿದ್ದಾರೆ.ಕೇರಳ ಸರಕಾರದ ಯೋಜನೆಗಳಿಗೆ ಅವರು ತಿಲಾಜಂಲಿ ಬಿಟ್ಟಿರುವದರಿಂದ ತಲಚೇರಿ- ಮೈಸೂರು ರೈಲು ಯೋಜನೆಯೂ ಸ್ಥಗಿತಗೊಂಡಂತಾಗಿದ್ದು ಈ ಯೋಜನೆಗೆ ಅವರ ವರದಿಯಲ್ಲಿನ ನಕಾರಾತ್ಮಕ ಅಂಶಗಳು ಕೊಡಗಿನ ಹೋರಾಟಗಾರರಿಗೆ ಪೂರ್ಣ ಗೆಲವು ತಂದು ಕೊಟ್ಟಂತಾಗಿದೆ.