ಮಡಿಕೇರಿ.ಮಾ.10: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಚೆರಿಯಮನೆ ಕುಟುಂಬಸ್ಥರ ಅಶ್ರಯದೊಂದಿಗೆ ಏರ್ಪಡಿಸಲಾಗಿರುವ ಚೆರಿಯಮನೆ ಕಪ್ ಕ್ರಿಕೆಟ್ ಹಬ್ಬ ಅಚರಣೆ ಸಂಬಂಧ ಪೂರ್ವಭಾವಿ ಸಭೆ ಇಲ್ಲಿನ ಗೌಡ ಸಮಾಜ ಸಭಾಂಗಣದಲ್ಲಿ ನಡೆಯಿತು.
ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರಿಕೆಟ್ ಹಬ್ಬವನ್ನು ಎಲ್ಲರ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ನಡೆಸುವ ಬಗ್ಗೆ ಚರ್ಚಿಸಲಾಯಿತು. ಕ್ರಿಕೆಟ್ ಹಬ್ಬದಲ್ಲಿ ಭಾಗವಹಿಸುವ ಕುಟುಂಬ ತಂಡಗಳು ತಾ.28ರ ಒಳಗಡೆ ಹೆಸರು ನೊಂದಾಯಿಸಿಕೊಳ್ಳುವಂತೆ, ನಂತರ ನೊಂದಾಯಿಸಿಕೊಳ್ಳವವರಿಗೆ ಅವಕಾಶ ನೀಡದಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ನೊಂದಾವಣಿಗೆ ಮೂಲೆಮಜಲು ಮನೋಜ್ (9483111134), ದಂಬೆಕೋಡಿ ಗಯಾ (9449765669), ಅಚ್ಚಲ್ಪಾಡಿ ಪ್ರಸಾದ್ (9481770780) ಇವರುಗಳನ್ನು ಸಂಪರ್ಕಿಸಬಹುದಾಗಿದೆ.
ಮುಂದಿನ ಪೂರ್ವಭಾವಿ ಸಭೆಯನ್ನು ಯುವ ವೇದಿಕೆ ಹಾಗೂ ಚೆರಿಯಮನೆ ಕುಟುಂಬಸ್ಥರು ಸೇರಿ ಜಂಟಿಯಾಗಿ ತಾ.12ರಂದು ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಮಾದಪ್ಪ, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ನಿರ್ದೇಶಕರುಗಳು ಹಾಜರಿದ್ದರು.