ಸೋಮವಾರಪೇಟೆ, ಮಾ. 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರಪೇಟೆ ವಲಯದ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳಿಗೆ ಸೌರಶಕ್ತಿ ದೀಪ ಮತ್ತು ವಾಟರ್ ಹೀಟರ್ ಅಳವಡಿಕೆಗೆ ಅನುದಾನ ನೀಡಲಾಯಿತು.
ತಾಲೂಕಿನ ಗೋಪಾಲಪುರ, ಅಬ್ಬೂರುಕಟ್ಟೆ, ಗೌಡಳ್ಳಿ, ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ ಸದಸ್ಯರಿಗೆ ವಲಯ ಮೇಲ್ವಿಚಾರಕ ರಮೇಶ್ ಅನುದಾನ ವಿತರಿಸಿದರು. ಈ ಸಂದರ್ಭ ಸೋಮವಾರಪೇಟೆ ಒಕ್ಕೂಟದ ಸೇವಾ ಪ್ರತಿನಿಧಿ ಎಂ.ಎ. ರುಬೀನಾ ಉಪಸ್ಥಿತರಿದ್ದರು.