*ಗೋಣಿಕೊಪ್ಪಲು, ಮಾ. 10: ಚೆನ್ನಯ್ಯನಕೋಟೆ ಹಾಗೂ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು.
ಶಾಸಕ ಕೆ.ಜಿ. ಬೋಪಯ್ಯ ಕಾಂಕ್ರಿಟ್ ರಸ್ತೆ ಹಾಗೂ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಕೆಸುವಿನ ಕೆರೆ ಹಾಡಿ 5 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗೆ, ಅಬ್ಬೂರು ರಸ್ತೆಗೆ 5 ಲಕ್ಷ ವೆಚ್ಚದಲ್ಲಿ, ಚೆನ್ನಯ್ಯನಕೋಟೆ ಕಾಲೋನಿ ರಸ್ತೆಗೆ 5 ಲಕ್ಷ, ದಿಡ್ಡಳ್ಳಿ ರಸ್ತೆ 5 ಲಕ್ಷ, ಗುಡ್ಲೂರು, ದೊಡ್ಡ ಕಟ್ಟೆ, ನಡುಮನೆ ರಸ್ತೆಗೆ 15 ಲಕ್ಷ, ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಬೊಮ್ಮಿಕೆರೆ ರಸ್ತೆಗೆ 5 ಲಕ್ಷ, ಚೆನ್ನಂಗಿ ಜನತಾ ಕಾಲೋನಿ ರಸ್ತೆಗೆ 5 ಲಕ್ಷ, ಕಾಡಗಂಡಿ ಕಾಲೋನಿಗೆ 5 ಲಕ್ಷ, ಆರ್ಮುಗ, ಪೆಮ್ಮಯ್ಯ ಮನೆಗೆ ತೆರೆಳುವ ರಸ್ತೆ ಡಾಂಬರೀಕರಣಕ್ಕೆ 3 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಗ್ರಾ.ಪಂ. ಅಧ್ಯಕ್ಷೆ ಅನಿತಾ, ಸದಸ್ಯ ಅರುಣ್, ಮಾಲ್ದಾರೆ ಗ್ರಾ.ಪಂ. ಸದಸ್ಯ ಅಪ್ಪಾಜಿ, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ರತೀಶ್, ತಾ.ಪಂ. ಮಾಜಿ ಅಧ್ಯಕ್ಷ ದಿನೇಶ್, ಫೆಡರೇಶನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಶಾಸಕರ ಸಹಾಯಕ ನರಸಿಂಹ, ಗುತ್ತಿಗೆದಾರ ಆರ್ಮುಗ ಹಾಗೂ ಗ್ರಾಮಸ್ಥರು ಹಾಜರಿದ್ದರು.